ಅದರಂತೆ ಈಗ ವಿನೋದ್ ರಾಜ್ ಚಿತ್ರದುರ್ಗಕ್ಕೆ ತೆರಳಿ ರೇಣುಕಾಸ್ವಾಮಿ ಪೋಷಕರು, ಪತ್ನಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಹೊರಟಿದ್ದಾರೆ. ಬರೀ ಅಷ್ಟೇ ಅಲ್ಲದೇ 1 ಲಕ್ಷ ರೂ. ಹಣವನ್ನೂ ಸಹಾಯದ ರೂಪದಲ್ಲಿ ನೀಡಲಿದ್ದಾರೆ. ಇದಕ್ಕಾಗಿ ಇಂದು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೊರಟಿದ್ದಾರೆ.
ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿ ರೇಣುಕಾಸ್ವಾಮಿ ಕುಟುಂಬಕ್ಕೆ ಪರಿಹಾರ ಧನ ನೀಡಿತ್ತು. ಹಲವಾರು ಸಂಘ-ಸಂಸ್ಥೆಗಳೂ ನೆರವಾಗಿದ್ದರು. ಕುಟುಂಬಕ್ಕೆ ಆರ್ಥಿಕವಾಗಿ ಏಕೈಕ ಆಧಾರವಾಗಿದ್ದ ರೇಣುಕಾಸ್ವಾಮಿಯನ್ನು ಕಳೆದುಕೊಂಡಿದ್ದರಿಂದ ಅವರ ಪತ್ನಿಗೆ ಸರ್ಕಾರೀ ನೌಕರಿ ಕೊಡಿ ಎಂದು ಈಗಾಗಲೇ ಅವರ ತಂದೆ ಕಾಶೀನಾಥಯ್ಯ ಸರ್ಕಾರಕ್ಕೆ ಮೊರೆಯಿಡುತ್ತಿದ್ದಾರೆ. ಇದಕ್ಕೆ ಟೀಕೆಗಳೂ ಕೇಳಿಬಂದಿವೆ.