ಕಿಚ್ಚ ಸುದೀಪ್ ಹೊಗಳಿದ ವಿಶ್ವನಾಥನ್ ಆನಂದ್

ಸೋಮವಾರ, 14 ಜೂನ್ 2021 (09:24 IST)
ಬೆಂಗಳೂರು: ಕೊರೋನಾ ಸಂಕಷ್ಟಪೀಡಿತರಿಗಾಗಿ ಸಹಾಯಾರ್ಥ ಚೆಸ್ ಪಂದ್ಯವಾಡಿದ ಕಿಚ್ಚ ಸುದೀಪ್ ಗೆ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ನಿನ್ನೆ ಸಂಜೆ ವಿಶ್ವನಾಥನ್ ಆನಂದ್ ಏಕಕಾಲದಲ್ಲಿ ಒಟ್ಟು 10 ಸೆಲೆಬ್ರಿಟಿಗಳೊಂದಿಗೆ ಚೆಸ್ ಪಂದ್ಯವಾಡಿದ್ದರು. ಈ ಪೈಕಿ ಸುದೀಪ್ ಅಲ್ಲದೆ, ಕ್ರಿಕೆಟಿಗ ಯಜುವೇಂದ್ರ ಚಾಹಲ್, ರಿತೇಶ್ ದೇಶಮುಖ್, ಸಾಜಿದ್ ನಾಡಿಯವಾಲ್ ಸೇರಿದಂತೆ ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.

ಈ ಪಂದ್ಯದಲ್ಲಿ ಸುದೀಪ್ ಜೊತೆಗೆ ಆಡಿದ್ದನ್ನು ವಿಶೇಷವಾಗಿ ಉಲ್ಲೇಖಿಸಿದ ಆನಂದ್, ಅವರು ನನಗೆ ಉತ್ತಮ ಪೈಪೋಟಿ ನೀಡಿದರು ಎಂದು ವಿಶೇಷವಾಗಿ ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ