ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ವಾಗ್ದಾಳಿ ನಡೆಸಲಾಗುತ್ತಿದ್ದು, ನಟಿ ಕಂಗನಾ ಹರಾಮ್ ಖೋರ್ ಲಡ್ಕಿ ಎಂದು ಬೈದಿರೋದು ಭಾರೀ ವಿವಾದಕ್ಕೆ ಕಾರಣವಾಗುತ್ತಿದೆ.
ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಹೋಲಿಸಿದ್ದರಿಂದ ವಿವಾದಕ್ಕೆ ಒಳಗಾದ ನಟಿ ಕಂಗನಾ ರನೌತ್ ಅವರನ್ನು ಬಾಲಿವುಡ್ ನಟಿ ದಿಯಾ ಮಿರ್ಜಾ ಬೆಂಬಲಿಸಿದ್ದಾರೆ.
ರಾಜಕಾರಣಿ ಸಂಜಯ್ ರಾವತ್ ಅವರು ಕಂಗನಾ ರಣಾವತ್ ಗೆ 'ಹರಮ್ ಖೋರ್ ಲಡ್ಕಿ' ಎಂದು ಟ್ಯಾಗ್ ಮಾಡಿದ್ದಾರೆ. ಸಂಜಯ್ ರಾವತ್ ಅವರು ಬಳಸಿದ ಭಾಷೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುವ ನಟಿ ದಿಯಾ, ಕಂಗನಾ ಅವರನ್ನು ಬೆಂಬಲಿಸಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ, ಸಂಜಯ್ ರಾವತ್ ‘ ಹರಮ್‌ಖೋರ್ ’ಪದ ಬಳಸಿದ್ದಕ್ಕೆ ಬಲವಾಗಿ ಖಂಡಿಸಿದ್ದಾರೆ.
ಕಂಗನಾ ಹೇಳಿದ್ದಕ್ಕೆ ನಿಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ನಿಮಗೆ ಎಲ್ಲ ಹಕ್ಕಿದೆ. ಆದರೆ ಅಂತಹ ಭಾಷೆಯನ್ನು ಬಳಸಿದ್ದಕ್ಕಾಗಿ ನೀವು ಕ್ಷಮೆಯಾಚಿಸಬೇಕು ಎಂದು ಆಗ್ರಹ ಮಾಡಿದ್ದಾರೆ.