ವೃತ್ರ ಸಿನಿಮಾದಲ್ಲಿ ರಶ್ಮಿಕಾ ಸ್ಥಾನಕ್ಕೆ ಆಯ್ಕೆಯಾದ ನಟಿ ಯಾರು ಗೊತ್ತಾ?

ಶುಕ್ರವಾರ, 28 ಸೆಪ್ಟಂಬರ್ 2018 (08:57 IST)
ಬೆಂಗಳೂರು : ನಟಿ ರಶ್ಮಿಕಾ ಮಂದಣ್ಣ ನಟಿಸಲು ಒಪ್ಪಿ ಫೋಟೊ‌ಶೂಟ್ ಮಾಡಿಸಿ ಕೈಕೊಟ್ಟ ವೃತ್ರ ಸಿನಿಮಾಕ್ಕೆ ಇದೀಗ ಮತ್ತೊಬ್ಬ ನಟಿಯನ್ನು ಚಿತ್ರತಂಡ ಆಯ್ಕೆ ಮಾಡಿದೆ.

ರಕ್ಷಿತ್ ಶೆಟ್ಟಿ ಕ್ಯಾಂಪ್ ನಿಂದ ಬಂದ ಹುಡುಗ ಗೌತಮ್ ಅಯ್ಯರ್ ಅವರ ವೃತ್ರ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ತನಿಖಾಧಿಕಾರಿಯಾಗಿ ನಟಿಸಬೇಕಿತ್ತು. ಈ ಪಾತ್ರಕ್ಕೆ ಮೊದಲು ಒಪ್ಪಿ‌ ಫೋಟೊ‌ಶೂಟ್ ಮಾಡಿಸಿ, ಈ ಚಿತ್ರದ ಕಥೆ ನನಗೆ ತುಂಬಾ ಇಷ್ಟವಾಗಿದೆ ಅಂತ ಹೇಳಿ, ‌ಇನ್ನೇನು‌ ಸಿನಿಮಾ ಸೆಟ್ಟೇರಬೇಕು ಎಂಬ ಸಮಯದಲ್ಲಿ ನಾನು ಈ ಚಿತ್ರದಲ್ಲಿ ನಟಿಸಲ್ಲ ಎಂದು ಹೇಳಿ ಕೈ ಬಿಟ್ಟಿದ್ದಾರೆ.

 

ಆದಕಾರಣ ಇದೀಗ ಚಿತ್ರತಂಡ  ತಮ್ಮ‌ ಚಿತ್ರಕ್ಕೆ ಮತ್ತೊಬ್ಬ ಹೊಸ  ನಟಿಯನ್ನ ಆಯ್ಕೆ ಮಾಡಿದ್ದಾರೆ . ನಟನೆಯಲ್ಲಿ‌ ಅನುಭವ ಹೊಂದಿರುವ ನಿತ್ಯಾ ಶ್ರೀಗೆ ಅವಕಾಶ ನೀಡಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ