Darshan Thoogudeepa: ಪವಿತ್ರಾ ಗೌಡರನ್ನು ಮತ್ತೆ ಭೇಟಿ ಮಾಡಲಿದ್ದಾರೆ ದರ್ಶನ್: ಎಲ್ಲಿ ಇಲ್ಲಿದೆ ಡೀಟೈಲ್ಸ್

Krishnaveni K

ಮಂಗಳವಾರ, 8 ಏಪ್ರಿಲ್ 2025 (11:36 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಆರೋಪಿಗಳಾದ, ಗೆಳತಿ ಪವಿತ್ರಾ ಗೌಡರನ್ನು ಇಂದು ನಟ ದರ್ಶನ್ ಮತ್ತೆ ಭೇಟಿ ಮಾಡಲಿದ್ದಾರೆ. ಎಲ್ಲಿ ಇಲ್ಲಿದೆ ಸಂಪೂರ್ಣ ವಿವರ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ ದರ್ಶನ್ ಎ2 ಆರೋಪಿಯಾಗಿದ್ದಾರೆ. ಪ್ರಕರಣದಲ್ಲಿ ಒಟ್ಟು 17 ಮಂದಿ ಆರೋಪಿಗಳಿದ್ದಾರೆ. ಎಲ್ಲರೂ ಈಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಹೊರಬಂದ ಬಳಿಕ ದರ್ಶನ್ ಆದಷ್ಟು ಪವಿತ್ರಾ ಗೌಡರಿಂದ ಅಂತರ ಕಾಯ್ದುಕೊಂಡಿದ್ದರು. ಇತ್ತೀಚೆಗಂತೂ ಎಲ್ಲೇ ಹೋದರೂ ತಮ್ಮ ಪತ್ನಿ ವಿಜಯಲಕ್ಷ್ಮಿ ಜೊತೆಗೇ ಹೋಗುತ್ತಿದ್ದಾರೆ. ಪವಿತ್ರಾ ತಮ್ಮದೇ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಆದರೆ ಎಲ್ಲಾ ಆರೋಪಿಗಳೂ ಪ್ರತೀ ತಿಂಗಳು ನ್ಯಾಯಾಲಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕಾಗುತ್ತದೆ. ಅದರಂತೆ ಇಂದು ಎಲ್ಲಾ ಆರೋಪಿಗಳೂ ಸಿಸಿಎಸ್ ಕೋರ್ಟ್ ಗೆ ಹಾಜರಾಗಲಿದ್ದಾರೆ.

ಈ ಹಿಂದೆ ಎರಡು ಬಾರಿ ಇದೇ ರೀತಿ ನಿಯಮದಂತೆ ದರ್ಶನ್ ಹಾಗೂ ಇತರೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕಳೆದ ಬಾರಿ ಅಂತೂ ದರ್ಶನ್ ಮತ್ತು ಪವಿತ್ರಾ ಮುಖಾಮುಖಿಯಾದರೂ ಮಾತಾಡಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ