ಗರ್ಭಾವಸ್ಥೆಯಲ್ಲಿ ಮಹಿಳೆಯರು ಕಾಫಿ ಸೇವನೆ ಮಾಡಬಹುದೇ?

ಮಂಗಳವಾರ, 27 ನವೆಂಬರ್ 2018 (07:43 IST)
ಬೆಂಗಳೂರು : ಗರ್ಭಾವಸ್ಥೆಯಲ್ಲಿ  ಮಹಿಳೆಯರು ಕಾಫಿ ಇಂದ ದೂರವಿರುವುದೇ ಸೂಕ್ತ. ಕಾಫಿ ಗರ್ಭಾವಸ್ಥೆಯಲ್ಲಿ ಸುರಕ್ಷಿತವಲ್ಲ. ಅದು  ತಾಯಿಯ ಆರೋಗ್ಯಕ್ಕಷ್ಟೇ ಅಲ್ಲದೆ ಮಗುವಿನ ಆರೋಗ್ಯಕ್ಕೂ ಹಾನಿ ಉಂಟು ಮಾಡಬಹುದು.


ಕೆಫೀನ್ ಅಂಶದಿಂದ ನಿಮ್ಮ ಹೊಟ್ಟೆಯಲ್ಲಿರುವ ಮಗುವಿನ ಹೃದಯದ ಬಡಿತ ಏರುಪೇರಾಗಬಹುದು. ನಿಮ್ಮ ಮಗುವಿನ ಮೆದುಳಿನ ಬೆಳವಣಿಗೆಗೆ ನಿಮ್ಮ ದೇಹದಲ್ಲಿರುವ ಕೆಫೀನ್ ಅಂಶ ಅಡ್ಡಿಯುಂಟು ಮಾಡಬಹುದು. ಇದರಿಂದಾಗಿ ನಿಮ್ಮ ಮಗುವಿನಲ್ಲಿ ಕುಂಠಿತ ಬೆಳವಣಿಗೆ ಕಾಣಬಹುದು. 


ಕೆಫಿನ್ ಅಂಶ ನಿಮ್ಮ ದೇಹದ ಕೊಬ್ಬಿನಂಶವನ್ನು ಹೀರುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರಿಂದಾಗಿ ರಕ್ತಹೀನತೆ ಯಂತಹ ತೊಂದರೆಗಳು ತಲೆದೂರಬಹುದು. ನಿಮ್ಮ ದೇಹದಲ್ಲಿ ಕೆಫೀನ್ ಅಂಶ ಜಾಸ್ತಿಯಿದ್ದರೆ, ಅದು ನಿಮ್ಮ ಮಗುವಿನಲ್ಲಿ ಕ್ಯಾನ್ಸರ್ ರೋಗಳನ್ನು ಉಂಟುಮಾಡಬಹುದು. ಗರ್ಭಾವಸ್ಥೆಯಲ್ಲಿ ಅತಿಯಾದ ಕೆಫೀನ್ ಸೇವನೆ ಇಂದ ನಿಮ್ಮ ಮಗುವಿನ ಜನನದ ತೂಕ ಕಡಿಮೆಯಾಗಬಹುದು. ಇದರಿಂದ ಹಲವಾರು ರೋಗಗಳು ನಿಮ್ಮ ಮಗುವಿಗೆ ಕಾಡಬಹುದು. 


ಹಾಗಾಗಿ ಗರ್ಭಿಣಿಯರು ಪ್ರತಿನಿತ್ಯ ೨ ಕಪ್ ಹೆಚ್ಚಾಗಿ ಕಾಫಿಯನ್ನು ಸೇವಿಸದಿರುವುದೇ ಉತ್ತಮ. ಹಾಗೇ ಗರ್ಭಾವಸ್ಥೆಯ ಮೊದಲ ಮೂರು ತಿಂಗಳು ಕಾಫಿ ಇಂದ ದೂರವಿರುವುದು ಒಳಿತು.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ