ನಾಳೆ ಕುಟುಂಬಸ್ಥರಿಂದ ಅಂಬರೀಶ್ ಚಿತಾಭಸ್ಮ ವಿಸರ್ಜನೆ

ಮಂಗಳವಾರ, 27 ನವೆಂಬರ್ 2018 (10:51 IST)
ಬೆಂಗಳೂರು: ಶನಿವಾರ ನಿಧನರಾದ ಹಿರಿಯ ನಟ ಅಂಬರೀಶ್ ಚಿತಾಭಸ್ಮ ವಿಸರ್ಜನೆ ಮತ್ತು ಸಮಾಧಿಗೆ ಹಾಲು ತುಪ್ಪ ಬಿಡುವ ಕಾರ್ಯಕ್ರಮ ನಾಳೆ ನಡೆಯಲಿದೆ.

ಇಂದು ಅಂಬರೀಶ್ ಕುಟುಂಬಸ್ಥರು ಬೆಳಿಗ್ಗೆ ಸಮಾಧಿ ಬಳಿ ತೆರಳಿ ಹಾಲು ತುಪ್ಪ ಬಿಡುವ ಕಾರ್ಯ ನಡೆಸಲಿದ್ದಾರೆ ಎನ್ನಲಾಗಿತ್ತು. ಈ ಹಿನ್ನಲೆಯಲ್ಲಿ ಬೆಳಿಗ್ಗೆಯಿಂದಲೇ ಕಂಠೀರವ ಸ್ಟುಡಿಯೋದ ಸಮಾಧಿ ಬಳಿ ಗೇಟ್ ಬಂದ್ ಮಾಡಿ ಭದ್ರತೆ ಮಾಡಲಾಗಿತ್ತು.

ಆದರೆ ಇದೀಗ ಈ ಕಾರ್ಯಕ್ರಮ ನಾಳೆಗೆ ಮುಂದೂಡಲಾಗಿದ್ದು, ಬಳಿಕ ಕುಟುಂಬಸ್ಥರು ಚಿತಾಭಸ್ಮ ಸಂಗ್ರಹಿಸಿ ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆ ಕಾರ್ಯ ಮಾಡಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ