ಉನ್ನತ ಗುಣ

ಫ್ರೆಂಚ್ ಸೈನಿಕರು ಜರ್ಮನಿಯಲ್ಲಿ ಬಿಡಾರ ಹೂಡಿದ್ದರು. ಕುದುರೆಗಳಿಗೆ ಅಗತ್ಯವಾದ ಹುಲ್ಲನ್ನು ಒದಗಿಸುವ ಕೆಲಸವನ್ನು ಒಬ್ಬ ಸೈನ್ಯಾಧಿಕಾರಿಗೆ ವಹಿಸಲಾಗಿತ್ತು. ಆ ಅಧಿಕಾರಿ ತನ್ನ ಸೈನಿಕರೊಂದಿಗೆ ಹೊರಟ. ನಿಯಮಿತ ಸ್ಥಳಕ್ಕೆ ಬಂದು ಸೇರಿದ. ಅಲ್ಲಿ ಮರಗಳು ಮಾತ್ರ ಇದ್ದನು. ಆ ಪ್ರದೇಶ ಒಂದು ಸಣ್ಣ ಕಂದರ. ಸುತ್ತಲೂ ಬೆಟ್ಟಗುಡ್ಡಗಳಿದ್ದುವು. ಸ್ವಲ್ಪ ದೂರದಲ್ಲಿ ಒಂದು ಗುಡಿಸಲು ಕಾಣಿಸುತ್ತಿತ್ತು.

ಆ ಅಧಿಕಾರಿ ಆ ಗುಡಿಸಲಿನ ಬಾಗಿಲನ್ನು ತಟ್ಟುವಂತೆ ಹೇಳಿದ. ಬಾಗಿಲನ್ನು ತಟ್ಟಿದಾಗ ಬಿಳಿ ಗಡ್ಡಧಾರಿಯಾದ ಒಬ್ಬ ಮುದುಕ ಹೊರಬಂದ. ಯಜಮಾನರೆ, ನಮ್ಮ ಕುದುರೆಗಳಿಗೆ ಹುತ್ತು ಬೇಕಾಗಿದೆ. ಒಂದು ಹೊಲವನ್ನು ತೋರಿಸಿ. ನಾವು ಅಲ್ಲಿರುವ ಹುಲ್ಲನ್ನು ಕೊಯ್ದುಕೊಳ್ಳುತ್ತೇವೆ ಎಂದನು ಅಧಿಕಾರಿ. ಸರಿ ನನ್ನ ಜತೆಯಲ್ಲಿ ಬನ್ನಿ ಎಂದು ಹೇಳಿ ಮುದುಕ ಮುಂದೆ ನಡೆದ. ಆ ಮುದುಕನನ್ನು ಸೈನಿಕರು ಹಿಂಬಾಲಿಸಿದರು. ಕಾಲು ಗಂಟೆ ನಡೆದ ನಂತರ ಒಂದು ಹುಲ್ಲಿನ ಹೊಲವನ್ನು ತಲುಪಿದರು.

ಇದು ಸಾಕು. ಇಲ್ಲಿಯೇ ಕೊಯ್ದುಕೊಳ್ಳೋಣ ಎಂದ ಅಧಿಕಾರಿ. ಸ್ವಲ್ಪ ತಾಳ್ಮೆಯಿಂದ ನನ್ನ ಜತೆ ಬನ್ನಿ ಎಂದು ಹೇಳುತ್ತಾ ಮುಂದೆ ನಡೆದ ಆ ಮುದುಕ. ಸೈನಿಕರೂ ಅವನನ್ನು ಹಿಂಬಾಲಿಸುತ್ತಾ ನಡೆದರು. ಬೇರೊಂದು ಹುಲ್ಲಿನ ಹೊಲವನ್ನು ತಲುಪಿದರು. ಅಲ್ಲಿಗೆ ಹೋದ ಕೂಡಲೆ ಇದ್ನು ಕೊಯ್ದುಕೊಳ್ಳಿ ಎಂದು ಆ ಮುದುಕ. ಸೈಲಿಕರು ಹುಲ್ಲನ್ನು ಕೊಯ್ಯಲು ತೊಡಗಿದರು. ಅನಂತರ ಹುಲ್ಲನ್ನು ಹೇರಿಕೊಂಡು ಕುದುರೆಗಳನ್ನು ಏರಿದರು.

ಆಗ, ಹಿರಿಯರೆ, ನಮ್ಮನ್ನು ಇಷ್ಟು ದೂರ ಏಕೆ ಕರೆದುಕೊಂಡು ಬಂದಿರಿ ಮೊದಲು ನೋಡಿದ ಹೊಲದಲ್ಲೆ ಹುಲ್ಲು ಇನ್ನೂ ಚೆನ್ನಾಗಿತ್ತಲ್ಲವೆ. ಅದನ್ನೇ ನೀವು ನನಗೆ ತೋರಿಸಿಬಹುದಾಗಿತ್ತು ಅಲ್ಲವೆ ಎಂದು ಕೇಳಿದ ಸೈನ್ಯಾಧಿಕಾರಿ. ಅದಕ್ಕೆ ಆ ಮುದುಕ, ನಿಜ ಸ್ವಾಮಿ, ಆದರೆ ಆ ಹೊನ ನನ್ನದಲ್ಲ ಅದನ್ನು ಕೊಯ್ಯಲು ನಾನು ಹೇಗೆ ಹೇಳುವುದು. ಇದು ನನ್ನ ನೆಲ, ಆದ್ದರಿಂದ ಇದನ್ನು ತೋರಿಸಿದೆ ಎಂದನು. ಇದನ್ನು ಕೇಳಿದ ಅಧಿಕಾರಿ ಆ ಮುದುಕನ ಉದಾತ್ತ ಗುಣವನ್ನು ಕಂಡು
ಆಶ್ಚರ್ಯಚಕಿತನಾದ.

- ಾ| ವಿ. ಗೋಪಾಲಕೃಷ್ಣ

(ಲೇಖಕರ ಪರಿಚಯ - ಡಾ. ವಿ. ಗೋಪಾಲಕೃಷ್ಣ ಅವರು ನಿವೃತ್ತ ಕನ್ನಡ ಪ್ರಾಧ್ಯಾಪಕರು. ಬಹುಭಾಷಾ ವಿದ್ವಾಂಸರಾದ ಇವರು ಭಾಷಾ ಶಾಸ್ತ್ರ, ಸ್ಥಳನಾಮ ಶಾಸ್ತ್ರ, ನಿಘಂಟು ಹಾಗೂ ಸಂಪಾದಕರಾಗಿ, ಅನುವಾದಕರಾಗಿ ಬಹುಮುಖ ಸೇವೆ ಸಲ್ಲಿಸಿದ್ದಾರೆ. ಇವರ ಅನೇಕ ಸಂಶೋಧನಾತ್ಮಕ ಗ್ರಂಥಗಳು, ಲೋಖನಗಳು ಪ್ರಕಟವಾಗಿವೆ. ಪ್ರಸ್ತುತ ಚೆನ್ನೈ ನಗರದ ಅಡಯಾರಿನ ಒಂದು ಸಂಶೋಧನಾತ್ಮಕ ಸಂಸ್ಥೆಯ ನಿರ್ದೇಶಕರಾಗಿದ್ದು, ಸಂಶೋಧನೆಯಲ್ಲಿ ಮತ್ತು ಮಾರ್ಗದರ್ಶನ ನೀಡುವುದರಲ್ಲಿ ತೊಡಗಿದ್ದಾರೆ.)

ವೆಬ್ದುನಿಯಾವನ್ನು ಓದಿ