ಅನಂತ್ ಕುಮಾರ್ ಹೆಗಡೆ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಡಿಂಗ್ ನಲ್ಲಿ ಸಮಸ್ಯೆ

ಭಾನುವಾರ, 16 ಆಗಸ್ಟ್ 2020 (11:06 IST)
ಬೆಂಗಳೂರು : ಹವಾಮಾನ ವೈಪರೀತ್ಯದಿಂದ ಸಂಸದ ಅನಂತ್ ಕುಮಾರ್ ಹೆಗಡೆ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಡಿಂಗ್ ನಲ್ಲಿ ಸಮಸ್ಯೆ ಎದುರಾಗಿದೆ.

ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ಇಂಡಿಗೋ ವಿಮಾನದಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಕೂಡ ಪ್ರಯಾಣಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆದರೆ  6ಇ7162 ಎಟಿಆರ್ ವಿಮಾನ ಲ್ಯಾಡಿಂಗ್ ಗೆ ಅನುಮತಿ ಸಿಗದ ಕಾರಣ ಆಕಾಶದಲ್ಲೇ ಹಾರಾಡುತ್ತಿದೆ ಎನ್ನಲಾಗಿದೆ.

 ಹವಾಮಾನ ವೈಪರೀತ್ಯ ಹಿನ್ನಲೆಯಲ್ಲಿ ಅನುಮತಿ ನೀಡದ ಸಿಬ್ಬಂದಿ ಸ್ವಲ್ಪ ಸಮಯದ ಬಳಿಕ ಲ್ಯಾಂಡಿಂಗ್ ಮಾಡುವುದಾಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ  ಹುಬ್ಬಳ್ಳಿ ಏರ್ ಪೋರ್ಟ್ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ