ಎನ್ ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರ್ಪಡೆ ವಿಚಾರವಾಗಿ ಮಾಜಿ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.ಜೆಡಿಎಸ್ ಎನ್ ಡಿಎಗೆ ಸ್ವಾಗತ ಕೋರ್ತೇವೆ.ನಮ್ಮ ಜೊತೆ ಜೆಡಿಎಸ್ ಅಧಿಕೃತ ಕೈ ಜೋಡಿಸಿರಲಿಲ್ಲ.ಈಗ ಜೆಡಿಎಸ್ ನಮ್ಮ ಜೊತೆ ಇದೆ.ಕ್ಷೇತ್ರಗಳ ಮಟ್ಟದಲ್ಲಿ ಸಣ್ಣ ಪುಟ್ಟ ವೈಮನಸ್ಸು ಇರುತ್ವೆ.ವರಿಷ್ಠರು ನಿರ್ಧಾರ ತೆಗೆದುಕೊಂಡಾಗ ಎಲ್ಲರೂ ಗೌರವಿಸಬೇಕು.ಇದು ಎರಡೂ ಪಕ್ಷಕ್ಕೂ ಶಕ್ತಿ ತುಂಬುತ್ತೆ.ಏನೇ ಇದ್ರೂ ಎಲ್ಲಾ ಮರೆತು ಒಂದಾಗಬೇಕು ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಜೆಡಿಎಸ್ ಗೆ ಲಾಭ ಅನ್ನೋ ವಿಚಾರವಾಗಿ ಕಳೆದ ಬಾರಿ ೨೫ಇತ್ತು, ಈ ಬಾರಿ ೨೮ಆಗುತ್ತೆ.ಇದು ನಮಗೆ ಲಾಭವೇ.ಕಾಂಗ್ರೆಸ್,ಜೆಡಿಎಸ್ ಕೈಜೋಡಿಸಿ ಏನಾಗಿದೆ ಗೊತ್ತಿದೆ .ಜೆಡಿಎಸ್,ಬಿಜೆಪಿ ಮೈತ್ರಿಯಿಂದ ಹೆಚ್ಚು ಕಮ್ಮಿ ಇಲ್ಲ.೫೦:೫೦ಆಗುತ್ತೆ,ಈ ಮೈತ್ರಿ ಸಂತೋಷ ತಂದಿದೆ.ಇವತ್ತು ಬಿಜೆಪಿ ಬೇರು ಮಟ್ಟದಿಂದ ಸಂಘಟನೆ ಕಟ್ಟಿದೆ.ಸಮಯ ಬಂದಾಗ ಎಲ್ಲರನ್ನೂ ಜೊತೆ ಸೇರಿಸಿಕೊಳ್ಳ ಬೇಕು.ಎಲ್ಲರಿಗೂ ಜಾಗ ಇದೆ,ಅವಕಾಶದ ಕೊರತೆ ಇಲ್ಲ.ಜೊತೆಯಲ್ಲಿ ಒಟ್ಟಾಗಿ, ಒಂದಾಗಿ ಸಾಗಬೇಕು.ಜೆಡಿಎಸ್ ನಲ್ಲೂ ಬಿಜೆಪಿ ಇಷ್ಟಪಡೋರು ಇದಾರೆ.ಜೆಡಿಎಸ್ನವ್ರು ನಮ್ಮವರನ್ನು ಸಮಾನವಾಗಿ ನೋಡಬೇಕು ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.