CBI ತನಿಖೆಗೆ ವಿಪಕ್ಷಗಳ ಆಗ್ರಹ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಅವರು ಯಾವ ರಾಜಕೀಯ ಬೇಕಾದ್ರೂ ಮಾಡ್ಲಿ.ಯಡಿಯೂರಪ್ಪ ಪರ್ಮೀಶನ್ ಕೊಟ್ಟಿದ್ದು ಗೊತ್ತಿಲ್ವಾ?ಅವರ ಎಜಿ ಪರ್ಮೀಶನ್ ಕೊಡೋಕೆ ಬರಲ್ಲ ಅಂದಿದ್ರು.ಆದರೂ ಅವರು ಪರ್ಮಿಷನ್ ಕೊಡಲಿಲ್ವಾ?ಅವರ ಪಾರ್ಟಿ MLA ಗಳದ್ದು ಬೇಕಾದಷ್ಟಿದೆ.ಸ್ಪೀಕರ್ ಅತ್ರ ತೆಗೆದುಕೊಂಡು ಹೋಗಿ ಕೊಟ್ರು.ಈಗ ೯೦% ತನಿಖೆ ಮಾಡ್ತೇವೆ ಅಂದಿದ್ದೇವೆ.ನೋಡೋಣ ನಮ್ಮ ಅಡ್ವೋಕೇಟ್ ಗಳತ್ರ ಚರ್ಚೆ ಮಾಡ್ತೇನೆ.ಏನು ಮಾಡಬೇಕು ಅಂತ ಚರ್ಚೆ ಮಾಡ್ತೇನೆ.ಹಾದೀಲಿ ಬೀದೀಲಿಹೋಗುವರಿಗೆ ಉತ್ತರ ಕೊಡಲ್ಲ.ಕೋರ್ಟ್ ಏನು ಹೇಳುತ್ತೆ ಅದಕ್ಕೆ ಉತ್ತರ ಕೊಡಬೇಕಷ್ಟೇ ಎಂದು ಮಾದ್ಯಮದವರ ಮೇಲೂ ಡಿಕೆಶಿವಕುಮಾರ್ ಗರಂ ಆದ್ರು.
ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ,ಕಾಡುಗೊಲ್ಲ ಸಮುದಾಯ ವಿರೋಧ ವಿಚಾರವಾಗಿ ರಾಜಕೀಯವಾಗಿ ಯಾರು ಪ್ರಬಲ ಇರ್ತಾರೆ.ಅಂತವರಿಗೆ ವಿರೋಧ ಮಾಡ್ತಾರೆ.ಮೋರ್ ದಿ ಸ್ಟ್ರಾಂಗ್ ಮೋರ್ ದಿ ಎನಿಮೀಸ್.ಪೂರ್ಣಿಮಾ ಅವರು ಶಾಸಕರಾಗಿದ್ರು.ಅವರ ತಂದೆ ಮಂತ್ರಿ ಆಗಿದ್ರು, ನಮ್ಮ ಪಾರ್ಟಿಯವರು.ಅಲಯನ್ಸ್ ಸರಿ ಇಲ್ಲ ಅಂತ ಬರ್ತಿದ್ದಾರೆ.ಅವರ ಅಡ್ಮಿಶನ್ ತೆಗೆದುಕೊಳ್ತೇವೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿಕೆಶಿ ಹೇಳಿದ್ದಾರೆ.