ಕೊಹ್ಲಿ ಸ್ವಾರ್ಥಿ ಎಂದವರಿಗೆ ಕೆಎಲ್ ರಾಹುಲ್ ಕೊಟ್ಟ ಸಮರ್ಥನೆಯಿದು! ಹೃದಯ ಗೆದ್ದ ರಾಹುಲ್!

ಶುಕ್ರವಾರ, 20 ಅಕ್ಟೋಬರ್ 2023 (12:37 IST)
Photo Courtesy: Twitter
ಪುಣೆ: ಬಾಂಗ್ಲಾದೇಶ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಟಾರ್ ಬ್ಯಾಟಿಗ ಕೊಹ್ಲಿ ತಂಡದ ಗೆಲುವಿನ ಸನಿಹದಲ್ಲಿದ್ದಾಗ ಸಿಂಗಲ್ಸ್ ತೆಗೆಯದೇ ವೈಯಕ್ತಿಕ ಶತಕ ಗಳಿಸಲು ಸ್ವಾರ್ಥಿಯಾದರು ಎಂದು ಕೆಲವರು ಟೀಕಿಸಿದ್ದರು.

ಆದರೆ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಕೆಎಲ್ ರಾಹುಲ್ ಇದಕ್ಕೆ ಸ್ಪಷ್ಟನೆ ನೀಡಿದ್ದು ಕೊಹ್ಲಿ ಆಡಿದ್ದ ಮಾತುಗಳನ್ನು ಕೇಳಿದರೆ ಟೀಕಿಸಿದವರಿಗೆ ಪಶ್ಚಾತ್ತಾಪವಾದೀತು.

‘ನಾನು ವಿರಾಟ್ ಶತಕ ಗಳಿಸಲಿ ಎಂದು ಸಿಂಗಲ್ಸ್ ತೆಗೆಯಲು ನಿರಾಕರಿಸಿದಾಗ ವಿರಾಟ್ ಹಾಗೆ ಮಾಡಬೇಡಿ, ಇದರಿಂದ ಜನ ನನ್ನನ್ನು ಸ್ವಾರ್ಥಿ ಎಂದುಕೊಳ್ಳುತ್ತಾರೆ, ಚೆನ್ನಾಗಿ ಕಾಣಿಸಲ್ಲ ಎಂದರು. ಆದರೆ ನಾನು ಪರವಾಗಿಲ್ಲ, ಹೇಗಿದ್ದರೂ ನಮ್ಮ ಗೆಲುವು ಖಚಿತ, ನೀವು ಶತಕ ಗಳಿಸಿ ಎಂದೆ’ ಎಂದು ಸ್ಪಷ್ಟನೆ ನೀಡಿದ್ದಾರೆ. ಕೊಹ್ಲಿ ಶತಕದ ಬಳಿಕ ಸಾಕಷ್ಟು ಜನ ಅವರನ್ನು ಸ್ವಾರ್ಥಿ ಎಂದರೆ ಇನ್ನು ಕೆಲವರು ಕೆಎಲ್ ರಾಹುಲ್ ತ್ಯಾಗಕ್ಕೆ ಕೊಂಡಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ