ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೇವಲ 100 ದಿನಗಳವರೆಗೆ ಮಾತ್ರ ಶಾಲೆಗಳು ನಡೆಯುತ್ತವೆ ಎಂಬ ಸುದ್ದಿ ಹರಿದಾಡುತ್ತಿದೆ.
ಆದರೆ 100 ದಿನ ಶಾಲೆ ನಡೆಸಬೇಕು ಅಂತ ಸರಕಾರ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ ಸ್ಪಷ್ಟಪಡಿಸಿದ್ದಾರೆ.
ತಜ್ಞರ ಸಮಿತಿಯು 100 ದಿನ ಶಾಲೆ, 100 ದಿನ ಮನೆಯಿಂದ ಕಲಿಕೆ ಮಾಡಬೇಕು ಅಂತ ವರದಿ ಕೊಟ್ಟಿದೆ. ಆದರೆ ಶಾಲೆಗಳನ್ನು ಇಷ್ಟೇ ದಿನ ನಡೆಸಬೇಕು ಎಂದು ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರ ಈವರೆಗೆ ತೀರ್ಮಾನ ಮಾಡಿಲ್ಲ ಎಂದಿದ್ದಾರೆ.
ಸಿಲೆಬಸ್ ಕಡಿತ, ಅವಧಿ ಕಡಿತ, ದಿನ ಬಿಟ್ಟು ದಿನ ಶಾಲೆ ನಡೆಸಬೇಕಾ ಅನ್ನೋದು ಇನ್ನೂ ಚರ್ಚಾ ಹಂತದಲ್ಲೇ ಇದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.