117 ಕೆ.ಜಿ. ತೂಕ ಹೊಂದಿದ್ದ ಮಹಿಳೆಗೆ ಎರಡನೇ ಬಾರಿ ಯಶಸ್ವಿ “ಬೇರಿಯಾಟ್ರಿಕ್” ಶಸ್ತ್ರಚಿಕಿತ್ಸೆ

ಶುಕ್ರವಾರ, 14 ಜನವರಿ 2022 (20:53 IST)
ಬೆಂಗಳೂರು: 117 ಕೆಜಿ ತೂಕ ಹೊಂದಿದ್ದ 50 ವರ್ಷದ ಮಹಿಳೆಗೆ ಫೊರ್ಟಿಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಬೊಜ್ಜು ಕರಗಿಸುವ “ಮರು ಬೇರಿಯಾಟ್ರಿಕ್” ಶಸ್ತçಚಿಕಿತ್ಸೆ ನಡೆಸಿದ್ದಾರೆ.
 
ಲ್ಯಾಪ್ರೋಸ್ಕೋಪಿ ಹಿರಿಯ ಸಲಹೆಗಾರ, ಬ್ಯಾರಿಯಾಟ್ರಿಕ್ ಸರ್ಜನ್ ಡಾ. ಗಣೇಶ್ ಶೆಣೈ ಅವರ ತಂಡವು 117 ತೂಕ ಹೊಂದಿದ್ದ ಮಹಿಳೆಗೆ ಮರು ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
 
50 ವರ್ಷದ ಮಹಿಳೆಯು 8 ವರ್ಷಗಳ ಹಿಂದೆಯೇ ಖಾಸಗಿ ಆಸ್ಪತ್ರೆಯೊಂದರಲ್ಲಿ ಬೇರಿಯಾಟ್ರಿಕ್ ಶಸ್ತçಚಿಕಿತ್ಸೆ ಮಾಡಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರು 114 ಕೆ.ಜಿ. ತೂಕ ಹೊಂದಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಅವರು ಬರೋಬ್ಬರಿ 25 ಕೆ.ಜಿ. ತೂಕ ಹೊಂದಿದ್ದರು. ಆದರೆ, ಒಂದು ವರ್ಷದೊಳಗಾಗಿ ಗ್ಯಾಸ್ಟ್ರಿಕ್ ಸ್ಲೀವ್ ಹಿಗ್ಗುವಿಕೆಯಿಂದಾಗಿ 117 ಕೆ.ಜಿ. ತೂಕಕ್ಕೆ ಬಂದು ನಿಂತರು. ಇದು ಅತ್ಯಂತ ಅಪಾಯಕಾರಿ ಎಂದು ಡಾ. ಗಣೇಶ್ ಶೆಣೈ ಹೇಳುತ್ತಾರೆ.
 
ಈ ಮಹಿಳೆಯರು ಮೊದಲು ಮಾಡಿಸಿಕೊಂಡಿದ್ದ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ತೆರೆದ ಅಪೆಂಡೆಕ್ಟಮಿ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.  ಜೊತೆಗೆ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಸಹ ಹೊಂದಿದ್ದರು, ಈ ಎಲ್ಲದರ ಪರಿಣಾಮ ಅವರ ಗ್ಯಾಸ್ಟ್ರಿಕ್ ಸ್ಲೀವ್ ಹಿಗ್ಗುತ್ತಾ ಹೋಯಿತು. ಅವರು ಎಷ್ಟೇ ಡಯೆಟ್ ಹಾಗೂ ವ್ಯಾಯಾಮ ಮಾಡಿದರೂ ಅವರ ಬೊಜ್ಜು ಬೆಳೆಯುತ್ತಾ ಒಂದು ವರ್ಷದೊಳಗೆ 117 ಕೆ.ಜಿ.ಗೆ ಬಂದು ನಿಂತರು.
ನಮ್ಮ ತಂಡವು ಅವರ ಅಷ್ಟೂ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಅವರಿಗೆ ಲ್ಯಾಪರೋಸ್ಕೋಪಿಕ್ ಮರು ಸ್ಲೀವ್ ಶಸ್ತ್ರಚಿಕಿತ್ಸೆಯನ್ನು ನಡೆಸಿದೆವು. ಈ ಎಲ್ಲದರ ಪ್ರಯತ್ನದಿಂದಾಗಿ ಮತ್ತೊಮ್ಮೆ ಮಹಿಳೆಗೆ ಬೇರಿಯಾಟ್ರೀಕ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಬಾರಿ ಸೂಕ್ತ ರೀತಿಯಲ್ಲಿ ಶಸ್ತ್ರಚಿಕಿತ್ಸೆಯಾಗಿರುವುದರಿಂದ ಅವರ ತೂಕ ಕ್ರಮೇಣ ಕಡಿಮೆಯಾಗಲಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ