ಕಬ್ಬು ಬೆಳೆಗಾರರಿಗೆ ಸರ್ಕಾರದಿಂದ ೨೦೨ ಕೋಟಿ ಗಿಪ್ಟ್
ಕಬ್ಬಿನ ಉಪ ಉತ್ಪನ್ನದ ಲಾಭಾಂಶವನ್ನು ರೈತರಿಗೆ ಕೊಡಲು ನಮ್ಮ ಸರ್ಕಾರ ನಿರ್ಧರಿಸಿದೆ ಸಕ್ಕರೆ ಸಚಿವ ಮುನೇನಕೊಪ್ಪ ಹೇಳಿದ್ದಾರೆ. ಈ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಕಬ್ಬಿನ ಉಪ ಉತ್ಪನ್ನ ವನ್ನ ಲಾಭಾಂಶ ರೈತರಿಗೆ ಕೊಡಲು ನಮ್ಮ ಸರ್ಕಾರ ನಿರ್ಧರಿಸಿದೆ. ಅನೇಕ ತಜ್ಞರ ವರಿದಿ ಇಟ್ಟುಕೊಂಡು, ೨೦೨ ಕೋಟಿ ಲಾಭಾಂಶ ರೈತರಿಗೆ ಕೊಡಲು ನಿರ್ಧರಿಸಿದ್ದೇವೆ. ಹೊಸ ಬದಲಾವಣೆ ತರುವಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ.ನಮ್ಮ ಸರ್ಕಾರದಲ್ಲಿ ಯಾವುದೇ ಕಾರ್ಖಾನೆಗಳು ರೈತರ ಬಾಕಿ ಮೊತ್ತ ಇಲ್ಲದ ಹಾಗೇ ನೋಡಿ ಕೊಂಡಿದೆ.ಇಗಾ ೪೪ ಸಕ್ಕರೆ ಕಾರ್ಖಾನೆಗಳು ಹೊಸದಾಗಿ ಸ್ಥಾಪಿಸುವುದಕ್ಕೆ ಅರ್ಜಿ ಬಂದಿವೆ.ಸಾಗಾಣಿಕೆ ವೆಚ್ಚದಲ್ಲಿ ಹಾಗೂ ತೂಕದಲ್ಲಿ ವ್ಯತ್ಯಾಸ ಆಗುತ್ತಿದೆ ಎಂದು ಹೇಳಿದ್ದಾರೆ.ಅವುಗಳಿಗೆ ಒಂದು ಕಮೀಟಿ ಮಾಡುತ್ತಿದ್ದೇವೆ. ಕಮೀಟಿ ವರದಿ ತೆಗೆದುಕೊಡು ಮೂರು- ನಾಲ್ಕು ತಿಂಗಳಿನಲ್ಲಿ ಪರಿಹಾರ ಮಾಡುತ್ತೇವೆ. ಈ ಹಿನ್ನಲೆ ಎಲ್ಲಾ ರೈತರ ಸಮಸ್ಯೆಗಳನ್ನ ಪರಿಹಾರ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.