ಜನರ ಮುಂದೆ ಹೋಗಲು ಬಿಜೆಪಿಗೆ ಹೆದರಿಕೆ ಇದೆ- ಡಿಕೆಶಿ

ಸೋಮವಾರ, 12 ಡಿಸೆಂಬರ್ 2022 (20:37 IST)
ಬಿಜೆಪಿ ಅವರು ಯಾಕೆ  ಕಾರ್ಪೊರೇಷನ್, ಜಿಲ್ಲಾಪಂಚಾಯತ್, ತಾಲೂಕ ಪಂಚಾಯತ್ ಎಲೆಕ್ಷನ್ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ ದೇಶದ ಕಾಂಗ್ರೆಸ್ ಪಕ್ಷವನ್ನು ಯಾರು ತೆಗಿಯಲು ಆಗಲ್ಲ.ಕೆಲವರು ಪ್ರಧಾನ ಮಂತ್ರಿ ಹೋದ್ರೆ ದೇಶಾನೇ ಬದಲಾವಣೆ ಆಗುತ್ತೆ ಎಂದು ಹೇಳ್ತಾರೆ.ಹಿಮಾಚಲ ದೆಹಲಿ ಪಕ್ಕದಲ್ಲಿತ್ತು, ದೆಹಲಿಯಲ್ಲಿ ಅವರ ಸರ್ಕಾರ, ಮಂತ್ರಿಗಳಿದ್ದರು.ಆಪ್ ಪಾರ್ಟಿ ,ಸಕತ್ ಮಾಡಿ, ಏನೇನು ಮಾಡಿ ಆಪ್ ಪಾರ್ಟಿ ಬಂತು.ಹಂಗೆ ಕರ್ನಾಟಕಕ್ಕೂ ,ಬೇರೆ ರಾಜ್ಯಕ್ಕೂ ಸಂಬಂಧವಿಲ್ಲ.ಮೊದಲಿಂದಲೂ ಒಂದು ಪದ್ದತಿಯಿದೆ.ಇಲ್ಲಿಯ ಆಡಳಿತ ಕೆಟ್ಟುಹೋಗಿದೆ.ದೇಶದಲ್ಲಿ ಜನ ಪ್ರಜ್ಞಾವಂತರು ಇದ್ದಾರೆ.ಕರ್ನಾಟಕ ಜನ ಬದಲಾವಣೆ ಬಯಸುತ್ತಿದ್ದಾರೆ. ಯಾಕೆ ಇವರು ಕಾರ್ಪೊರೇಷನ್, ಜಿಲ್ಲಾಪಂಚಾಯತ್, ತಾಲೂಕ ಪಂಚಾಯತ್ ಎಲೆಕ್ಷನ್ ಮಾಡಿಲ್ಲ. ಅವರ ಸರ್ವೇ ರಿಪೋರ್ಟ್ ನಲ್ಲಿ ಅವರ ವಿರುದ್ಧ ಜನ ಇದ್ದಾರೆ. ಸೋಲುತ್ತೇವೆ ಎನ್ನುವ ಮರ್ಯಾದೆ ದೃಷ್ಟಿಯಿಂದ ಎಲೆಕ್ಷನ್ ಮಾಡಿಲ್ಲ ಜನರ ಮುಂದೆ ಹೋಗಲು ಬಿಜೆಪಿಗೆ ಹೆದರಿಕೆ ಇದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ