50:50 ಸರ್ಕಾರ ರಚನೆಗೆ ಬಿಜೆಪಿ ಒಪ್ಪದ ಹಿನ್ನಲೆ; ಎನ್ ಸಿಪಿಯ ಜೊತೆ ಮೈತ್ರಿ ಸಾಧಿಸಲು ಮುಂದಾಯ್ತಾ ಶಿವಸೇನೆ?

ಸೋಮವಾರ, 4 ನವೆಂಬರ್ 2019 (07:16 IST)
ಮುಂಬೈ : ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಶಿವಸೇನೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ ಸಿಪಿ)ಯ ಜೊತೆ ಮೈತ್ರಿ ಸಾಧಿಸಲು ಮುಂದಾಗಿದೆ ಎನ್ನಲಾಗಿದೆ.




ಮಹಾರಾಷ್ಟ್ರದಲ್ಲಿ 50:50 ಸರ್ಕಾರ ರಚನೆಗೆ ಬಿಜೆಪಿ ಒಪ್ಪದ ಹಿನ್ನಲೆಯಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ ಸಿಪಿ)ಯ ಮುಖಂಡ ಅಜಿತ್ ಪವಾರ್ ಅವರನ್ನು ಶಿವಸೇನೆಯ ನಾಯಕ ಸಂಜಯ್ ರಾವತ್ ಸಂಪರ್ಕಿಸಲು ಪ್ರಯತ್ನಿಸಿದ್ದು, ಈ ಮೂಲಕ ಎನ್ ಸಿಪಿಯ ಜೊತೆ ಮೈತ್ರಿ ಸಾಧಿಸಲು ಶಿವಸೇನೆ ಮುಂದಾಗಿದೆ ಎನ್ನಲಾಗಿದೆ.


ಈ ಬಗ್ಗೆ ಮಾಹಿತಿ ನೀಡಿದ್ದ ಎನ್ ಸಿಪಿಯ ಮುಖಂಡ ಅಜಿತ್ ಪವಾರ್, ಶಿವಸೇನೆಯ ನಾಯಕ ಸಂಜಯ್ ರಾವತ್ ರಿಂದ ಸಂದೇಶ ಬಂದಿತ್ತು. ಆದರೆ ನಾನು ಸಭೆಯಲ್ಲಿ ಇದ್ದಿದ್ದರಿಂದ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಚುನಾವಣೆಯ ಬಳಿಕ ಇದೇ ಮೊದಲ ಬಾರಿಗೆ ನನಗೆ ಸಂದೇಶ ಕಳುಹಿಸಿದ್ದಾರೆ. ಯಾಕೆ ಸಂದೇಶ ಕಳುಹಿಸಿದ್ದಾರೆ ಎಂಬುದು ತಿಳಿದಿಲ್ಲ. ಅವರನ್ನು ಸಂಪರ್ಕಿಸುತ್ತೇನೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ