ಉಕ್ರೇನ್‌ಗೆ ಜರ್ಮನಿ ಕ್ಷಿಪಣಿಗಳ ನೆರವು

ಸೋಮವಾರ, 28 ಫೆಬ್ರವರಿ 2022 (07:58 IST)
ವ್ಲಾದಿಮಿರ್ ಪುಟಿನ್ ಪಡೆಗಳ ದಾಳಿಯಿಂದ ನಲುಗಿಹೋಗಿರುವ ಉಕ್ರೇನ್ಗೆ ಜರ್ಮನಿಯು ಶೀಘ್ರದಲ್ಲಿಯೇ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಕಳುಹಿಸಲು ತೀರ್ಮಾನಿಸಿದೆ.

 ''ರಷ್ಯಾ ದಾಳಿ ಮಾಡಿರುವುದು ಘನಘೋರವಾಗಿದೆ. ಹಾಗಾಗಿ, ಶೀಘ್ರದಲ್ಲಿಯೇ ಉಕ್ರೇನ್ಗೆ ಒಂದು ಸಾವಿರ ಯುದ್ಧ ಟ್ಯಾಂಕ್ ನಿರೋಧಕ ಕ್ಷಿಪಣಿ ಹಾಗೂ 500 'ಸ್ಟಿಂಗರ್' ಶ್ರೇಣಿಯ ಕ್ಷಿಪಣಿಗಳನ್ನು ಕಳುಹಿಸಲಾಗುತ್ತದೆ,'' ಎಂದು ಜರ್ಮನಿ ತಿಳಿಸಿದೆ.

ಇದರಿಂದ ರಷ್ಯಾ ಪಡೆಗಳ ವಿರುದ್ಧ ಹೋರಾಡಲು ಉಕ್ರೇನ್ಗೆ ಬಲ ಬರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ