ಬೆಂಗಳೂರಿನಲ್ಲಿ ವಾಕಿಂಗ್‌ಗೆ ಹೋಗಿದ್ದ 7 ಮಕ್ಕಳು ನಾಪತ್ತೆ

ಭಾನುವಾರ, 10 ಅಕ್ಟೋಬರ್ 2021 (21:46 IST)
ನಮಗೆ ಓದಿನಲ್ಲಿ ಆಸಕ್ತಿಯಿಲ್ಲ, ಕ್ರೀಡೆಯಲ್ಲಿಬ ಆಸಕ್ತಿಯಿದೆ ಎಂದು ಪತ್ರ ಬರೆದು ಬೆಂಗಳೂರಿನಲ್ಲಿ ವಾಕಿಂಗ್‌ಗೆ ಹೋಗಿದ್ದ 7 ಮಕ್ಕಳು ನಾಪತ್ತೆಯಾಗಿದ್ದಾರೆ. ಹೆಸರಘಟ್ಟ ರಸ್ತೆಯ ಸೌಂದರ್ಯ ಲೇಔಟ್‌ನ 3 ಬಾಲಕರು ಮತ್ತು ಎಜಿಬಿ ಲೇಔಟ್‌ನ ಬಾಲಕರಿಬ್ಬರು, ಬಾಲಕಿಯರಿಬ್ಬರು ನಾಪತ್ತೆಯಾಗಿದ್ದಾರೆ.
ರಾಯನ್(12), ಭೂಮಿ(13), ಚಿಂತನ್(14), ವರ್ಷಿಣಿ(21), ಪರೀಕ್ಷಿತ್(15), ಕಿರಣ್(15), ನಂದನ್(15) ನಾಪತ್ತೆಯಾದ ಮಕ್ಕಳು.
ಬಾಗಲಗುಂಟೆ, ಸೋಲದೇವನಹಳ್ಳಿ ಪೊಲೀಸ್‌ ಠಾಣೆಗೆ ಪೋಷಕರು ದೂರು ನೀಡಿದ್ದು, ಬಸ್‌, ರೈಲು ನಿಲ್ದಾಣ, ಪಾರ್ಕ್‌ಗಳಲ್ಲಿ ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ. ಬೆಂಗಳೂರಿನ ಎಲ್ಲಾ ಪೊಲೀಸ್‌ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದೆ.
ಪತ್ರ ಬರೆದಿಟ್ಟು ನಾಪತ್ತೆ:
ಎಷ್ಟೋತ್ತಾದರೂ ವಾಕಿಂಗ್ ಹೋದ ಮಕ್ಕಳು ಮನೆಗೆ ಬಾರದಿದ್ದಾಗ ದಿಗ್ಬ್ರಾಂತರಾದ ಕಿರಣ್ ತಂದೆ ನಾಗರಾಜು ಸ್ನೇಹಿತರ ಮನೆ ಶಾಲೆ ಎಲ್ಲಾ ಕಡೆ ವಿಚಾರಿಸಿದಾಗ ಕಿರಣ್ ಸ್ನೇಹಿತರು ಅವರ ಮನೆಯಲ್ಲಿ ಪತ್ರ ಬರೆದಿದ್ದು ನಮಗೆ ಓದಿನಲ್ಲಿ ಆಸಕ್ತಿಯಿಲ್ಲ ಹಾಗಾಗಿ ನಾವು ಯಾವುದಾದರೂ ಕ್ರೀಡೆಯಲ್ಲಿ ಸಾಧನೆ ಮಾಡು ಹಣ ಗಳಿಸಿಕೊಂಡು ಬರುತ್ತೇವೆ ಎಂದು ಬರೆದಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾದ ನಾಗರಾಜ ಮತ್ತು ಸ್ನೇಹಿತರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾಗಿರುವ ಬಾಲಕರ ಹುಡುಕಾಟ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ