ಆಟ‌ ಆಡೋಕೆ‌ ಹೋದ ಮಗು ಗುಂಡಿಗೆ ಬಿದ್ದು ಸಾವು

ಶನಿವಾರ, 25 ಫೆಬ್ರವರಿ 2023 (18:54 IST)
ಅಕಸ್ಮಾತ್ ಆಗಿ‌ ಸಂಭವಿಸೋ ಸಾವುಗಳು ಒಂದು ನಮ್ಮ ನಿರ್ಲಕ್ಷ್ಯಯಿಂದ ಆಗುತ್ವೆ.. ಇಲ್ಲ ಬೇರೆಯವರ ನಿರ್ಲಕ್ಷ್ಯದಿಂದ  ಸಂಭವಿಸುತ್ವೆ.. ಅದ್ರೆ ತುಂಬಾ ಆ್ಯಕ್ಸಿಡೆಂಟ್ ಸಾವುಗಳಾಗೋದು ಬೇರೆಯವ್ರ ನಿರ್ಲಕ್ಷ್ಯಯಿಂದಲೇ.. ಅದೇ ರೀತಿ ಕಾಮಗಾರಿ ಗುತ್ತಿಗೇದಾರ, ಬಿಲ್ಡಮಗ್ ಓನರ್ ವೊಬ್ಬರ ನಿರ್ಲಕ್ಷ್ಯಕ್ಕೆ ಆರು ವರ್ಷದ ಮಗು ಬಲಿಯಾಗಿದೆ.. ಆಟ ಆಡೋಕೆ ಅಂತಾ ಹೋದ ಮಗು ಲಿಫ್ಟ್ ಗುಂಡಿಗೆ ಬಿದ್ದು ಜೀವ ಬಿಟ್ಟಿದೆ.

ನಿರ್ಮಾಣ ಹಂತದಲ್ಲಿದ್ದ ಆರು ಅಂತಸ್ತಿನ ಕಟ್ಟಡದಲ್ಲಿ ಲಿಫ್ಟ್ ಗೆ ಅಂತ ಅಗೆದಿದ್ದ ಗುಂಡಿಯಲ್ಲಿ ಆರು ವರ್ಷದ ಮಗು ಬಿದ್ದು ಸಾವನ್ನಪ್ಪಿರೋ ದುರ್ಘಟನೆ ನಡೆದಿದೆ.. ಕೆ.ಆರ್ ಮಾರ್ಕೆಟ್ ಠಾಣಾ ವ್ಯಾಪ್ತಿಯ ಸುಲ್ತಾನ್ ಪೇಟೆಯ ಬಿಲ್ಡಿಂಗ್ ವೊಂದಲ್ಲಿ ಆಟ ಆಡೋಕೆ ಅಂತಾ ಹೋಗಿದ್ದ ಆರು ವರ್ಷದ ಮಹೇಶ್ವರಿ ಅನ್ನೋ ಹೆಣ್ಣು ಮಗು ಕಾಲು ಜಾರಿ ಗುಂಡಿಗೆ ಬಿದ್ದು ಸಾವನ್ನಪ್ಪಿದೆ.
ಅಂದ್ಹಾಗೆ ಈ ಗುಂಡಿಯಲ್ಲಿ ಬಿದ್ದು ಸತ್ತಿರೋ ಮಗುವಿನ ಕುಟುಂಬಕ್ಕೂ ಈ ಬಿಲ್ಡಿಂಗ್ ಗೂ ಸಂಬಂಧವಿಲ್ಲ.. ಯಾದಗಿರಿಯಿಂದ ಯಲಹಂಕಕ್ಕೆ ದುಡಿಯಲು ಬಂದಿದ್ದ ಮಲ್ಲಪ್ಪ ಮತ್ತು ಕಮಲಮ್ಮ ದಂಪತಿ ತಮ್ಮ ಮೂವರ ಮಕ್ಕಳ ಜೊತೆಗೆ ಕೂಲಿ ಕೆಲ್ಸ ಮಾಡ್ಕೊಂಡಿದ್ರು.. ಆದ್ರೆ ಅನಾರೋಗ್ಯ ಹಿನ್ನೆಲೆ ಸಿಟಿಕಡೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.. ಇನ್ನೇನು ಇಲ್ಲಿವರ್ಗೂ ಬಂದಿದೀವಲ್ಲ ಅಂತಾ ಕೆ.ಆರ್ ಮಾರ್ಕೆಟ್ ಬಳಿಯ ಸುಲ್ತಾನ್ ಪೇಟೆಯ ನಿರ್ಮಾಣ ಹಂತದ ಬಿಲ್ಡಿಂಗ್ ನಲ್ಲಿ ಕೂಲಿ ಕೆಲಸ ಮಾಡ್ತಿದ್ದ ಸಂಬಂಧಿಕರನ್ನ ಮಾತಾಡಿಸ್ಕೊಂಡು ಹೋದ್ರಾಯ್ತು ಅಂತಾ ಅವ್ರ ಮನೆಗೆ ಹೋಗಿದ್ದಾರೆ.. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಈ ಕಟ್ಟಡದ ಬಳಿ ಬಂದಿದ್ದವರು ಸ್ವಲ್ಪ ಹೊತ್ತು ಸಂಬಂಧಿಕರ ಜೊತೆ ಮಾತಾಡ್ಕೊಂಡು ಕೂಡೋ ಹೊತ್ತಿಗೆ ಸಂಜೆ 7ಗಂಟೆ ಆಗ್ಬಿಟ್ಟಿದೆ.. ಇನ್ನೇನು ಸಂಜೆ ಆಯ್ತು ಅಷ್ಟು ದೂರ ಯಾಕ್ ಹೋಗ್ತೀರ ರಾತ್ರಿ ಇಲ್ಲೇ ಇದ್ದು ಬೆಳಗ್ಗೆ ಯಲಹಂಕ ಹೋಗಿ ಮಕ್ಕಳಿದ್ದಾವೆ ಅಂತಾ ಮಲ್ಲಪ್ಪ ಮತ್ತು ಕಮಲಮ್ಮಗೆ ಅವ್ರ ಸಂಬಂಧಿಕರು ಅಲ್ಲೇ ಉಳಿಸಿಕೊಂಡಿದ್ದಾರೆ.. ಈ ವೇಳೆ ಬಿಲ್ಡಿಂಗ್ ನಲ್ಲಿಯೇ ಮಲ್ಲಪ್ಪ ದಂಪತಿಯ ಆರು ವರ್ಷದ ಮಹೇಶ್ವರಿ ಎಂಬ ಮಗು ಆಟ ಆಡೋಕೆ ಹೋಗಿದೆ.. ಆಟ ಆಡುತ್ತಲೇ ಲಿಫ್ಟ್ ಗಾಗಿ ಅಗೆದಿದ್ದ ಗುಂಡಿಯ ಬಳಿ ಹೋಗಿ ಕಾಲು ಜಾರಿ ಗುಂಡಿಯಲ್ಲಿ ಬಿದ್ದಿದೆ..ನಾಲ್ಕೈದು ಅಡಿ ಆಳವಿದ್ದು ಸಂಪೂರ್ಣ ನೀರು ಯುಂಬಿರೋ ಗುಂಡಿಯಲ್ಲಿ ಮಗು ಜಾಲು ಜಾರಿ ಬಿದ್ದಿದೆ.. ಮಗು ಕಾಣೆಯಾದ ಸ್ವಲ್ಪ ಹೊತ್ತು ಆದ್ಮೇಲೆ ಹುಡುಕಾಡಿದ ತಂದೆ ತಾಯಿಗೆ ಗುಂಡಿಯ ಬಳಿ ಬಟ್ಟೆ ತೇಲಿರೋದು ಗೊತ್ತಾಗಿದೆ.. ಹತ್ತ ಹೋಗ್ ನೋಡಿದ್ರೆ ಮಗು ತೇಲಾಡಿದೆ.. ಕೂಡಲೇ ಮಗುವನ್ನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಾಗ ಮಗು ಸತ್ತೋಗಿರೋದು ಗೊತ್ತಾಗಿದೆ.

ಹೇಳ್ಬೇಕು ಅಂದ್ರೆ ಈ ಘಟನೆಗೆ ಬಿಲ್ಡಿಂಗ್ ಮಾಲೀಕ ಮತ್ತು ಗುತ್ತಿಗೇದಾರರ ದಿವ್ಯ ನಿರ್ಲಕ್ಷ್ಯ ಎದ್ದು ಕಾಣ್ಸುತ್ತೆ.. ಬಿಲ್ಡಿಂಗ್ ನಲ್ಲಿ ಓಡಾಡೋರಿಗೆ ಲಿಫ್ಟ್ ಗಾಗಿ ಅಗೆದ ಗುಂಡಿಯೇ ಕಾಣ್ಸೋದಿಲ್ಲ.. ಆಟ್ಲಿಸ್ಟ್ ಇಲ್ಲಿ ಯಾರಾದ್ರು ಬೀಳ್ಬೋದು ಅನ್ನೋ ಯೋಚೆನೆಯಿಂದ ಸೇಫ್ಟಿ ಮೆಜರ್ಸ್ ಹಾಕೋದು ಬಿಟ್ಟು ಅದ್ರ ಬಗ್ಗೆ ಓನರ್ ಆಗಲಿ ಗುತ್ತಿಗೇದಾರ ಆಗ್ಲಿ ತಲೆ ಕೆಡಿಸಿಕೊಂಡಿರಲಿಲ್ಲ.. ಅವ್ರ ನಿರ್ಲಕ್ಷ್ಯಕ್ಕೆ ಈಗ ಮಗು ಬಲಿಯಾಗಿದೆ.. ಇನ್ನೂ ಕೆಲ ನಿಯಮ ಉಲ್ಲಂಘನೆ ಮಾಡಿರೋ ಬಿಲ್ಡಿಂಗ್ ಓನರ್ 4+1ಅಂತಾ ಪರ್ಮಿಷನ್ ತಗೊಂಡು 5+1ಅಂತಸ್ಥಿನ ಬಿಲ್ಡಿಂಗ್ ನಿರ್ಮಾಣಕ್ಕೆ ಮುಂದಾಗಿದ್ದಾರೆ ಅಂತಾ ಹೇಳಲಾಗ್ತಿದೆ.. ಬಿಬಿಎಂಪಿ ರೂಕ್ಸ್ ಬ್ರೇಕ್ ಮಾಡಿ, ಕೆಲಸಗಾರರಿಗೆ ಯಾವುದೇ ಸೆಫ್ಟಿ ಪ್ರಿಕಾಷನ್ ಇಲ್ದೆ ಗುತ್ತಿಗೆದಾರ ಮತ್ತು ಓನರ್ ಕೆಲಸ ಮಾಡಿಸ್ತಿದ್ದಾರೆ ಅಂತಾ ಆರೋಪ ಕೇಳಿ ಬಂದಿದೆ.ಸದ್ಯ ಘಟನೆ ಸಂಬಂಧ ಕೆ.ಆರ್ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ.. ಏನೆ ಹೇಳಿ.. ಬೇರೆಯವ್ರ ನಿರ್ಲಕ್ಷ್ಯಕ್ಕೆ ಮಗು ಪ್ರಾಣ ಹೋಗಿದ್ದು ಮಾತ್ರ ಬೇಸರದ ಸಂಗತಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ