ದಂಡ ಹಾಕೋದ್ರಲ್ಲೂ ಭಾರೀ ಗೋಲ್ ಮಾಲ್

ಮಂಗಳವಾರ, 1 ಅಕ್ಟೋಬರ್ 2019 (16:17 IST)
ಪ್ಲಾಸ್ಟಿಕ್ ಬಳಕೆ ಬ್ಯಾನ್ ಆಗಿದೆ. ಆದರೂ ಅಲ್ಲಲ್ಲಿ ಬಳಸ್ತಿರೋರ ಮೇಲೆ ದಂಡ ಪ್ರಯೋಗ ನಡೆಯುತ್ತಿದೆ. ಈ ನಡುವೆ ದಂಡ ಹಾಕೋದ್ರಲ್ಲೂ ಗೋಲ್ ಮಾಲ್ ನಡೆಯುತ್ತಿದೆ ಅಂತ ಜನರು ಆರೋಪ ಮಾಡ್ತಿದ್ದಾರೆ.

ಬೆಳಗಾವಿಯ ಅಥಣಿ ಪುರಸಭೆಗೆ ವ್ಯಾಪಾರಸ್ಥರು ಮುತ್ತಿಗೆ ಹಾಕಿ ಪುರಸಭೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಮಾರುಕಟ್ಟೆ ವ್ಯಾಪ್ತಿಯಲ್ಲಿ ಪುರಸಭೆ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟಗಾರರಿಗೆ ದಂಡ ವಿಧಿಸುವ ಸಂಧರ್ಭದಲ್ಲಿ ಅನ್ಯಾಯ ಮಾಡಿದ್ದಾರೆ. ಹೀಗಂತ ದೂರಿರೋ ಜನರು, ವ್ಯಾಪಾರಿಗಳಿಗೆ ಅನವಶ್ಯಕ ತೊಂದರೆ ಕೊಡುತ್ತಿದ್ದಾರೆ. ಬೇಕಾಬಿಟ್ಟಿಯಾಗಿ ದಂಡ ವಿಧಿಸಿ ಅನ್ಯಾಯ ಮಾಡುತ್ತಿದ್ದಾರೆ ಎಂದು ವ್ಯಾಪಾರಸ್ಥರು ಆರೋಪ ಮಾಡಿದ್ದಾರೆ.

ನೂರಕ್ಕೂ ಹೆಚ್ಚು ಜನ ಏಕಕಾಲಕ್ಕೆ ಅಥಣಿ ಪುರಸಭೆ ಆವರಣದಲ್ಲಿ ಜಮಾಯಿಸಿ ಅಧಿಕಾರಿಗಳ ವಿರುದ್ಧ  ಹರಿಹಾಯ್ದರು. ಪುರಸಭೆ ಮುಖ್ಯಾಧಿಕಾರಿ ಮಹಂತೇಶ ಕವಲಾಪೂರ ಮತ್ತು ಉಳಿದ ಅಧಿಕಾರಿಗಳ ವಿರುದ್ಧ ವ್ಯಾಪಾರಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ರು.

ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆಗೆ ದಂಡ ವಿಧಿಸುವಾಗ ತಮಗೆ ಬೇಕಾದವರಿಗೆ  ಕಡಿಮೆ ದಂಡ ಹಾಕಿ ಉಳಿದವರಿಗೆ ಹೆಚ್ಚು ದಂಡ ಹಾಕುತ್ತಿದ್ದಾರೆ. ಅನ್ಯಾಯ ಮಾಡುತ್ತಿದ್ದಾರೆ ಅಷ್ಟೇ ಅಲ್ಲದೇ ಯಾವುದೇ ಮುನ್ಸೂಚನೆ ನೀಡದೇ ಅಂಗಡಿಗಳಿಗೆ ನುಗ್ಗಿ ವ್ಯಾಪಾರಸ್ಥರ ಜೊತೆ ಮಾತಿಗೆ  ಮಾತು ಬೆಳೆಸಿ ದರೋಡೆಕೋರರ ತರಹ ವರ್ತಿಸುತ್ತಿದ್ದಾರೆ ಎಂದ ಜನರು ದೂರಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ