ಈತ ಹೆಲ್ಮೆಟ್ ಹಾಕದಿದ್ರೂ ದಂಡ ಕಟ್ಟೋದಿಲ್ಲ

ಮಂಗಳವಾರ, 17 ಸೆಪ್ಟಂಬರ್ 2019 (20:23 IST)
ವಾಹನಗಳ ದಾಖಲೆ,ಹೆಲ್ಮೆಟ್  ಕಡ್ಡಾಯ ಆದೇಶದಿಂದ ದೇಶದ ಜನರೇ ಚಿಂತೆಗೀಡಾಗಿದ್ದಾರೆ. ಆದರೆ ಈ ವ್ಯಕ್ತಿಗೆ ಮಾತ್ರ ಪೊಲೀಸರು ದಂಡ ಹಾಕುತ್ತಿಲ್ಲ.

ಆತ ವಾಹನದ ಎಲ್ಲ ದಾಖಲೆಗಳನ್ನು ಹೊಂದಿದ್ದಾನೆ. ಆದರೆ ಹೆಲ್ಮೆಟ್ ಮಾತ್ರ ಧರಿಸುತ್ತಿಲ್ಲ. ವಾಹನ ತಪಾಸಣೆ ಮಾಡೋವಾಗ ಪೊಲೀಸರು ಈತನನ್ನು ಹಿಡಿದರೂ ದಂಡ ಹಾಕದಿರೋ ಘಟನೆ ನಡೆದಿದೆ.

ವ್ಯಾಪಾರಿಯಾಗಿರೋ ಜಾಕೀರ್ ಮಾಮನ್  ಹೆಲ್ಮೆಟ್ ದಂಡ ಪಾವತಿಯಿಂದ ಪಾರಾದ ವ್ಯಕ್ತಿಯಾಗಿದ್ದಾನೆ. ಈತ ಗುಜರಾತ್ ನ ಬೋಡೆಲಿಯಲ್ಲಿನ ನಿವಾಸಿ.

ಜಾಕೀರ್ ಗೆ ದೊಡ್ಡದಾದ ದೇಹಕ್ಕೆ ತಕ್ಕಂತಿರೋ ತಲೆಯೇ ಆತನಿಗೆ ದಂಡದಿಂದ ಪಾರಾಗುವಂತೆ ಮಾಡುತ್ತಿದೆ.

ಜಾಕೀರ್ ತಲೆ ದೊಡ್ಡದಿದೆ. ಹೀಗಾಗಿ ಆತನ ಸೈಜಿಗೆ ತಕ್ಕ ಹೆಲ್ಮೆಟ್ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಹೀಗಾಗಿ ಹೆಲ್ಮೆಟ್ ಇಲ್ಲದೇ ಜಾಕೀರ್ ಸಂಚರಿಸುವಂತಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ