ಹೊಸ ವರ್ಷಕ್ಕೆ ಬೆಂಗಳೂರಿಗೆ ಬರ್ಬೇಕಾಗಿದ್ದ ಲಾರ್ಜ್ ಕ್ವಾಂಟಿಟಿ ಗಾಂಜಾ ಸೀಜ್

ಶನಿವಾರ, 24 ಡಿಸೆಂಬರ್ 2022 (14:44 IST)
ಹೊಸ ವರ್ಷಕ್ಕೆ ಬೆಂಗಳೂರಿಗೆ ಬರ್ಬೇಕಾಗಿದ್ದ ಲಾರ್ಜ್ ಕ್ವಾಂಟಿಟಿ ಗಾಂಜಾ ಸೀಜ್ ನ್ನ ಬೆಂಗಳೂರು ಕೋಣನಕುಂಟೆ ಪೊಲೀಸರು ಸೀಜ್ ಮಾಡಿದ್ದಾರೆ.ಗ್ರಾಹಕರ ರೀತಿ ಹೋಗಿ ಒರಿಸ್ಸಾದ ಕಾಡು ದಾರಿಯಲ್ಲೇ ಆರೋಪಿಗಳ ಬಂಧನ ಮಾಡಲಾಗಿದೆ.ಟೆಂಪೋ ಟ್ರಾವೆಲ್ಸ್ ಗೆ ಕಾಡಿನಿಂದ ಗಾಂಜಾ ತಂದು ಹಾಕ್ತಿದ್ದ ಇಬ್ಬರು ಆರೋಪಿಗಳು ಖಾಕಿ ಬಲೆಗೆ ಬಿದ್ದಿದ್ದಾರೆ.ಒರಿಸ್ಸಾದ ಗಜಪತಿ ಜಿಲ್ಲೆ ಹಾಗೂ ಮಯೂರ್ ಬನ್ಜ್ ಭಾಗದಲ್ಲಿ ಆರೋಪಿಗಳ ಅರೆಸ್ಟ್ ಮಾಡಲಾಗಿದೆ.ಜಗದೀಶ್ ಜಟ್ಟಿ,ಮುರುಳಿ ಬೆಹೆರಾ ಬಂಧಿತ ಆರೋಪಿಗಳಾಗಿದ್ದು,ಗ್ರಾಹಕರ ಸೋಗಿನಲ್ಲಿ ಒರಿಸ್ಸಾಗೆ ತೆರಳಿ ಆರೋಪಿಗಳನ್ನ ಹೆಡೆಮುರಿಕಟ್ಟಿದ್ದಾರೆ.ಬಂಧಿತರಿಂದ 35 ಲಕ್ಷ ರೂ ಮೌಲ್ಯದ 263 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.ಕೋಣನಕುಂಟೆ ಇನ್ಸ್ ಪೆಕ್ಟರ್ ಶಿವಕುಮಾರ್ ಟೀಂ ನಿಂದ ಆರೋಪಿಗಳ ಬಂಧನ ಮಾಡಲಾಗಿದೆ.ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ