ನಕಲಿ ವಕೀಲನ ವಿರುದ್ಧ ವಕೀಲರ ದೂರು

ಶನಿವಾರ, 15 ಸೆಪ್ಟಂಬರ್ 2018 (18:03 IST)
ನಕಲಿ ಸರ್ಟಿಫಿಕೇಟ್ ಸೃಷ್ಟಿಸಿ ವಕೀಲ ವೃತ್ತಿಯಲ್ಲಿ ತೊಡಗಿದ್ದ ವ್ಯಕ್ತಿಯ ವಿರುದ್ಧ ವಕೀಲರೇ ಪತ್ತೆ ಹಚ್ಚಿ, ದೂರು ದಾಖಲಿಸಿರುವ ಪ್ರಕರಣ ನಡೆದಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ನ್ಯಾಯಾಲಯದಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿದ್ದ ಎಂ.ಪಿ.ಪ್ರವೀಣ್ ಕುಮಾರ್ ಎಂಬುವರೇ ನಕಲಿ ದಾಖಲಾತಿ ಸೃಷ್ಠಿಸಿ ವಕೀಲಗಿರಿ ಮಾಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ. ಈತ ಕೆ.ಆರ್.ಪೇಟೆ ತಾಲೂಕಿನ ಮಡುವಿನಕೋಡಿ ಗ್ರಾಮದ ನಿವಾಸಿಯಾಗಿದ್ದು, 1998-99 ನೇ ಸಾಲಿನಲ್ಲಿ ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಗೆ ಸೇರ್ಪಡೆಯಾಗಿದ್ರು. ಆದ್ರೆ, ಕೋರ್ಸ್ ಕಂಪ್ಲೀಟ್ ಮಾಡದೇ ಅರ್ಧಕ್ಕೆ ಸ್ಥಗಿತಗೊಳಿಸಿದ್ರು. ಆದ್ರೆ 2015ರಲ್ಲಿ ಮೈಸೂರು ವಿವಿ ಹೆಸರಿನ ನಕಲಿ ಪದವಿ ಪ್ರಮಾಣ ಪತ್ರ ನೀಡಿ ಕೆ.ಆರ್.ಪೇಟೆ ತಾಲ್ಲೂಕು ನ್ಯಾಯಾಲಯದಲ್ಲಿ ವಕೀಲ ವೃತ್ತಿ ಆರಂಭಿಸಿದ್ದಾರೆ ಅಂತ ಆರೋಪ ಕೇಳಿ ಬಂದಿದೆ.

ಇನ್ನು ಕೆ.ಆರ್.ಪೇಟೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ರಾಜೇಶ್ ಅವ್ರು ಪ್ರವೀಣ್ ಕುಮಾರ್ ವಿರುದ್ಧ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ