ಪಕ್ಕದ ಮನೆಯವಳಿಗೆ ಪ್ಲೈಯಿಂಗ್ ಕಿಸ್ ಕೊಟ್ಟು ಜೈಲು ಸೇರಿದ ಭೂಪ

ಬುಧವಾರ, 14 ಆಗಸ್ಟ್ 2019 (14:49 IST)
ಫ್ಲೈಯಿಂಗ್ ಕಿಸ್ ಮಾಡಿದ ಭೂಪನೊಬ್ಬನಿಗೆ ಸರಿಯಾದ ಶಿಕ್ಷೆಯೇ ಆಗಿದೆ.

ತನ್ನ ಫ್ಲ್ಯಾಟ್ ಪಕ್ಕದಲ್ಲಿರೋ ಗೃಹಿಣಿಯೊಬ್ಬಳಿಗೆ ಭೂಪನೊಬ್ಬ ಫ್ಲೈಯಿಂಗ್  ಕಿಸ್ ಮಾಡುತ್ತಿದ್ದ. ಅಷ್ಟೇ ಅಲ್ಲದೇ ಅನುಚಿತವಾಗಿ ಸನ್ನೆಗಳನ್ನು ಮಾಡುತ್ತಿದ್ದನು.

ಪಕ್ಕದ ಮನೆ ಮಹಿಳೆಯು ತನ್ನ ಗಂಡನಿಗೆ ವಿಷಯ ತಿಳಿಸಿದ್ದಾಳೆ. ಆ ಬಳಿಕ ಆರೋಪಿ ವಿನೋದ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಳು.

ಆರೋಪಿ ವಿನೋದ್ ಕೂಡ ದಂಪತಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ದೂರು ನೀಡಿದ್ದನು. ಆದರೆ ಹಲ್ಲೆ ಮಾಡಿರೋ ಕುರಿತು ಯಾವುದೇ ಸಾಕ್ಷ್ಯ ಸಿಕ್ಕಿಲ್ಲ.

ಹೀಗಾಗಿ, ಆರೋಪಿ ವಿನೋದ್ ಗೆ ಮೊಹಾಲಿ ನ್ಯಾಯಾಲಯವು 3 ಸಾವಿರ ರೂ. ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ