ಮಹಿಳೆಯರ ಆ ದೃಶ್ಯ ಸೆರೆಹಿಡಿಯುತ್ತಿದ್ದ ಕಾಮುಕ ಏನಾದ?

ಸೋಮವಾರ, 12 ಆಗಸ್ಟ್ 2019 (19:07 IST)
ಮಹಿಳೆಯರ ಅಶ್ಲೀಲ ವಿಡಿಯೋ ಮಾಡುತ್ತಿದ್ದ ವಿಕೃತ ಕಾಮುಕನೊಬ್ಬ ಅರೆಸ್ಟ್ ಆಗಿದ್ದಾನೆ.

ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿದ್ದ ಆಕಾಶ ಬಂಧಿತ ಆರೋಪಿಯಾಗಿದ್ದಾನೆ. ಉತ್ತರ ಪ್ರದೇಶದ ಈ ಕಾಮುಕ ಬೆಂಗಳೂರಿನಲ್ಲಿದ್ದಾನೆ.

ಕಚೇರಿಯಲ್ಲಿ ಯುವತಿಯರು ಕುಳಿತುಕೊಳ್ಳುತ್ತಿದ್ದ ಕಂಪ್ಯೂಟರ್ ಸಿಸ್ಟ್ ಮ್ ಗಳ ಕೆಳಗೆ ಮೊಬೈಲ್ ಇಟ್ಟು ಹಾಗೂ ವಾಶ್ ರೂಂ, ಮಹಿಳೆಯರ ಡ್ರೆಸಿಂಗ್ ರೂಮಿನಲ್ಲಿ ಅಶ್ಲೀಲ ದೃಶ್ಯ ವಿಡಿಯೋ ಮಾಡಿಕೊಳ್ಳುತ್ತಿದ್ದ.

ಯುವತಿಯೊಬ್ಬಳ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವಾಗ ಸಿಕ್ಕಿ ಬಿದ್ದಿದ್ದು, ಈ ಕುರಿತು ಆರೋಪಿ ವಿರುದ್ಧ ದೂರು ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ