ದಿಢೀರನೇ ಬಾಳೆಹಣ್ಣಿನ ಬೆಲೆ ಏರಿಕೆ

ಶುಕ್ರವಾರ, 18 ಆಗಸ್ಟ್ 2023 (15:01 IST)
ಹಬ್ಬದ ಸಮಯವಾದ ಹಿನ್ನೆಲೆ ಬಾಳೆಹಣ್ಣಿನ ಬೆಲೆ ನಿಧಾನವಾಗಿ ಏರಿಕೆ ಕಾಣುತ್ತಿದೆ. ರಾಜ್ಯದಲ್ಲಿ  ಈ ಹಿಂದೆ ಟೊಮೆಟೊ ದರ ಆಪಲ್ ದರಕ್ಕಿಂತ ಹೆಚ್ಚಳವಾಗಿತ್ತು. ಜನಸಾಮಾನ್ಯರು ಟೊಮೇಟೊ ಕೊಳ್ಳಲು ಹಿಂದು ಮುಂದು ನೋಡುವಂತಹ ಪರಿಸ್ಥಿತಿ ಎದುರಾಗಿತ್ತು. ಎರಡು ತಿಂಗಳಿನಿಂದ ನೂರರ ಗಡಿದಾಟಿದ್ದ ಟೊಮೊಟೊ ಇದೀಗ 5೦-6೦ ರೂ ಗೆ ಇಳಿಮುಖ ಗೊಂಡಿದೆ, ಇಷ್ಟು ದಿನ ಮಾರುಕಟ್ಟೆಗೆ ಹೋದ್ರೆ ಟೊಮೊಟೊ ಅತ್ತ ಮುಖ ಮಾಡದ ಗ್ರಾಹಕರು ಇದೀಗ ಟೊಮೊಟೊ ಖರೀದಿ ಮಾಡಲು ಶುರುಮಾಡಿದ್ದಾರೆ.

ಒಂದು ಕಡೆ ಟಮೊಟೊ ದರ ಇಳಿಕೆ ಕಂಡರೆ ಇನ್ನೇನು ಕೆಲವೇ ದಿನಗಳಲ್ಲಿ ಹಬ್ವದ ಸೀಜ಼ನ್ ಶುರುವಾಗುತ್ತಿದ್ದು, ಹಬ್ವದ ಸೀಜನ್ ಶುರು ಬೆನ್ನಲ್ಲೇ ಬಾಳೆ ಹಣ್ಣಿನ ದರ ಏರಿಕೆಯಾಗಿದೆ. ಕಳೆದ ತಿಂಗಳು 4೦-5೦ರೂ ಇದ್ದ ಏಲಕ್ಕಿ ಬಾಳೆ ಹಣ್ಣು 9೦-1೦೦ರೂ ಆದರೆ. ಪಚ್ಚ ಬಾಳೆ 3೦-4೦ರೂ ಗೆ ಮಾರಾಟವಾಗುತ್ತಿದೆ. ಹೀಗಾಗಿ ಹಬ್ಬದ ಹೊಸ್ತಿಲಲ್ಲೇ ದರ ಏರಿಕೆ ಶಾಕ್ ಜನರಿಗೆ ತಟ್ಟಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ