ನಾನ್‌ವೆಜ್ ಪ್ರಿಯರಿಗೆ ಬ್ಯಾಡ್ ನ್ಯೂಸ್ ; ಚಿಕನ್ ಬೆಲೆ ಏರಿಕೆ!

ಶುಕ್ರವಾರ, 18 ಆಗಸ್ಟ್ 2023 (11:29 IST)
ಬೆಂಗಳೂರು : ಟೊಮೆಟೋ, ಬೆಳ್ಳುಳ್ಳಿ, ಬಾಳೆಹಣ್ಣು ಹೀಗೆ ತರಕಾರಿಗಳ ರೇಟ್ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರೋ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಕಾದಿದೆ. ಕೋಳಿ ರೇಟ್ ಕೇಳಿ ಗ್ರಾಹಕರು ಶಾಕ್ ಆಗಿದ್ದಾರೆ.

ಈ ಹಿನ್ನೆಲೆ ಶ್ರಾವಣ ಆರಂಭವಾಗಿರುವುದರಿಂದ ಕೋಳಿಗಳು ಡಿಮ್ಯಾಂಡ್ಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಜೊತೆಗೆ ಕೋಳಿಗೆ ಆಹಾರವಾಗಿ ಬಳಕೆಯಾಗುವ ಧಾನ್ಯ, ಅಕ್ಕಿಹೊಟ್ಟು, ಮೆಕ್ಕೆಜೋಳ, ಕಡಲೆಕಾಯಿ ಹಿಂಡಿ, ಸೋಯಾ ಬೆಲೆಯಲ್ಲೂ 25% ರಿಂದ 30% ರಷ್ಟು ಏರಿಕೆಯಾಗಿದೆ. ಇಂಧನ ಬೆಲೆ ಹೆಚ್ಚಳದಿಂದಾಗಿ ಸಾಗಣೆ ವೆಚ್ಚವೂ ಅಧಿಕವಾಗಿರುವುದರಿಂದ ಕೋಳಿಗಳ ಬೆಲೆಯೂ ಹೆಚ್ಚಳವಾಗಿದೆ.

ಬಾಯ್ಲರ್ ಕೋಳಿ – 170 ರೂ.
ಫಾರಂ ಕೋಳಿ- 140 ರೂ.
ನಾಟಿ ಕೋಳಿ (ಫಾರಂ) -350 ರೂ.
ಜವಾರಿ ನಾಟಿ ಕೋಳಿ – 550 ರೂ. 

ಈಗಷ್ಟೇ ಶ್ರಾವಣ ಆರಂಭವಾಗಿದ್ದು, ದಿನಕಳೆದಂತೆ ಕೋಳಿಗಳ ಬೆಲೆ ಇನ್ನೂ ಹೆಚ್ಚಾಗೋ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ