ದರ್ಶನ್ ಇರುವ ಠಾಣೆ ಸುತ್ತಾ ಶಾಮಿಯಾನ ಹೊದಿಸಿ, 144 ಸೆಕ್ಷನ್ ಜಾರಿ
ಇನ್ನೂ ನಟ ದರ್ಶನ್ ಅವರನ್ನು ಮರೆಮಾಚಲು ಠಾಣೆಯ ಸುತ್ತಾ ಶಾಮಿಯಾನ ಹಾಕಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಅದಲ್ಲದೆ ಪೊಲೀಸ್ ಠಾಣೆ ಸುತ್ತ ಶಾಮಿಯಾನದ ಪರದೆ ಹಾಕಿರುವುದು ಮತ್ತು ಠಾಣೆಯ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿರುವುದಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.