ಪ್ರೀತಿ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ

ಗುರುವಾರ, 7 ಡಿಸೆಂಬರ್ 2023 (13:43 IST)
ಪ್ರೀತಿ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಯುವಕ ಬೆಂಕಿ ಹಚ್ಚಿಕೊಂಡಿರುವ ಘಟನೆ ಕೆಂಗೇರಿಯ ಕೊಡಿಗೆ ಪಾಳ್ಯದಲ್ಲಿ ನಿನ್ನೆ ಮದ್ಯಾಹ್ನ ಸುಮಾರಿಗೆ ಘಟನೆ ನಡೆದಿದೆ.

ಆನೇಕಲ್ ತಾಲೂಕಿನ ಜಿಗಣಿಯ ಕಲ್ಲುಬಾಳು ಗ್ರಾಮದ ಯುವಕ ರಾಕೇಶ್ ಆಗಿದ್ದು,ಐದಾರು ವರ್ಷದಿಂದ‌ ಯುವತಿ ಜೊತೆ ಪ್ರೀತಿ ಮಾಡುತ್ತಿದ್ದ.ಇತ್ತೀಚೆಗೆ ಬೇರೆ ಯುವಕನ ಜೊತೆಗೆ ಮದುವೆಗೆ ಯುವತಿ ಸಿದ್ದವಾಗಿದ್ದಳು.ಇದರಿಂದಾಗಿ ಯುವತಿ ರಾಕೇಶನನ್ನು ಅವಾಯ್ಡ್ ಮಾಡಿದ್ದಳು.
 
ನಿನ್ನೆ ರಾಕೇಶ್ ಯುವತಿ ಮನೆಯ ಬಳಿ ಹೋಗಿ ಪ್ರಶ್ನೆ ಮಾಡಿದ್ದ.ಈ ಸಂದರ್ಭದಲ್ಲಿ ರಾಕೇಶ್ ಹಾಗೂ ಯುವತಿ ಜೊತೆ ಗಲಾಟೆ ಆಗಿತ್ತು.ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನ ನಡೆಸಿದ್ದಾನೆ.ಪೆಟ್ರೋಲ್ ಸುರಿದುಕೊಂಡು ರಾಕೇಶ್ ಬೆಂಕಿ ಹಚ್ಚಿಕೊಂಡಿದ್ದಾನೆ.ಕೂಡಲೇ ರಾಕೇಶ್ ನನ್ನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ರಾಕೇಶ್ ದೇಹದ ಬಹುತೇಕ ಬಾಗ ಸುಟ್ಟು  ಹೋಗಿತ್ತು.ತೀವ್ರ ನೋವಿನಿಂದ ಬಳಲುತ್ತಿದ್ದ ರಾಕೇಶ್ ನಿನ್ನೆ ರಾತ್ರಿ ಮೃತಪಟ್ಟಿದ್ದಾನೆ.ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ