ಸನ್ನಿ ಲಿಯೋನ್‌ಗೆ ಒಂದು ರಾತ್ರಿಗೆ ರೇಟ್ ಎಷ್ಟು ಎಂದು ಕೇಳಿದ ಭೂಪ

ಗುರುವಾರ, 7 ಡಿಸೆಂಬರ್ 2023 (13:24 IST)
ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್‌ ತಮ್ಮ ಮುಂಬರುವ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವರದಿಯ ಪ್ರಕಾರ ಸಿನಿಮಾ ಸೆಟ್‌ನಲ್ಲಿದ್ದ ವ್ಯಕ್ತಿಯೊಬ್ಬ ಸನ್ನಿ ಲಿಯೊನ್ ಜತೆ ಒಂದು ರಾತ್ರಿಗೆ ರೇಟ್ ಎಷ್ಟು ಎಂದ ಕೇಳಿ ಅಸಭ್ಯವಾಗಿ ಮಾತನ್ನಾಡಲಾರಂಭಿಸಿದ. ಇದನ್ನೆಲ್ಲಾ ನೋಡುತ್ತಿದ್ದ ಸನ್ನಿಯ ಸಹನಟಅಲ್ಲಿಗೆ ಆಗಮಿಸಿ ನಟಿಯನ್ನು ಕಾಡಿಸುತ್ತಿದ್ದ ವ್ಯಕ್ತಿಯ ಕೆನ್ನೆಗೆ ಬಾರಿಸಿದ ಘಟನೆ ವರದಿಯಾಗಿದೆ.
 
ನಟಿ ಗೌಹರ್ ಖಾನ್ ಕಪಾಳಮೋಕ್ಷ ಘಟನೆ ಬಾಲಿವುಡ್ ಅಂಗಳದಲ್ಲಿ ಇನ್ನು ಹಸಿರಾಗಿರುವಾಗ ಬಾಲಿವುಡ್‌ನ ಇನ್ನೊಬ್ಬ ಬೆಡಗಿ ಸನ್ನಿ ಲಿಯೊನ್ ಕೂಡ ಅದೇ ಮಾದರಿಯ ಸನ್ನಿವೇಶವೊಂದನ್ನು ಎದುರಿಸಿದ್ದಾರೆ. 
 
ತಮ್ಮ ಸಹ ನಟನ ಆವೇಶದ ವರ್ತನೆಯಿಂದ ಸನ್ನಿ ಒಂದು ಕ್ಷಣ ಆವಾಕ್ಕಾದರು. ನಂತರ ಆಕೆ ತನ್ನ ಗಂಡ ಡೇನಿಯಲ್ ವೆಬ್ಬರ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡರು.
 
ಆದರೆ ಚಿತ್ರ ತಂಡ  ಈ ಘಟನೆಯಲ್ಲಿ ಹುರುಳಿಲ್ಲ . ಮೋಹಿತ್ ಗಂಭೀರ ಸ್ವಭಾವದ ನಟ. ಆತ ಮಾತನಾಡುವುದು ಸಹ ಕಡಿಮೆಯೇ.ಸೆಟ್‌ನಲ್ಲಿ ಕಪಾಳಮೋಕ್ಷ ಘಟನೆಯೇ ನಡೆದಿಲ್ಲ ಎಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ