ವೃದ್ಧೆಯನ್ನು ಸೆಕ್ಸ್‌ಗೆ ಪೀಡಿಸಿದ್ದ ಯುವಕ ಅರೆಸ್ಟ್

ಗುರುವಾರ, 7 ಸೆಪ್ಟಂಬರ್ 2023 (10:33 IST)
ಬೆಂಗಳೂರು: ವೃದ್ಧೆಯನ್ನು ಸೆಕ್ಸ್ ಗೆ ಪೀಡಿಸಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಅಶೋಕ್ ಬಂಧಿತ ಆರೋಪಿ. ಈತ ಖಾಸಗಿ ಆಸ್ಪತ್ರೆ ಸಿಟಿ ಸ್ಕ್ಯಾನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಆಗಸ್ಟ್ 3 ರಂದು ವೃದ್ಧೆಯೊಬ್ಬರು ಅನಾರೋಗ್ಯದಿಂದ ಹೆಬ್ಬಾಳದಲ್ಲಿರೋ ಆಸ್ಪತ್ರೆಗೆ ದಾಖಲಾಗಿದ್ದರು.

ಆಗಸ್ಟ್ 4 ಬೆಳಗ್ಗಿನ ಜಾವ 1:30ರ ವೇಳೆಗೆ ವೃದ್ಧೆಯನ್ನು ಸಿಟಿ ಸ್ಕ್ಯಾನ್ಗೆ ಕರೆದೊಯ್ದು ಕೃತ್ಯ ಎಸಗಿದ್ದಾನೆ. ಈ ಹಿನ್ನೆಲೆಯಲ್ಲಿ ಸಿಟಿ ಸ್ಕ್ಯಾನ್ ಮೆಷಿನ್ ಮೇಲೆ ಮಲಗಿಸಿ ವಿವಸ್ತ್ರಗೊಳಿಸಿದ್ದ. ಬಳಿಕ ಸೆಕ್ಸ್ ಗೆ ಸಹಕರಿಸುವಂತೆ ಪೀಡಿಸಿದ್ದಾಗಿ ವೃದ್ಧೆ ಆರೋಪಿಸಿ ದೂರು ದಾಖಲಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ