ನ್ಯಾಷನಲ್ ಹೈವೇಯಲ್ಲಿ ಯುವಕರ ಹುಚ್ಚಾಟ

geetha

ಶನಿವಾರ, 17 ಫೆಬ್ರವರಿ 2024 (14:30 IST)
ಬೆಂಗಳೂರು-ನ್ಯಾಷನಲ್ ಹೈವೇಯಲ್ಲಿ ಯುವಕರು ಅಡ್ಡಾದಿಡ್ಡಿಯಾಗಿ ಬೈಕ್ ಚಾಲನೆ ಮಾಡಿ ಡಿವೈಡರ್ಗೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರು-ಸೇಲಂ ಹೈವೇಯಲ್ಲಿ ನಡೆದಿದೆ.ಒಂದೇ ಬೈಕ್ ನಲ್ಲಿ ಮೂರು ಜನ ಯುವಕರು  ಕುಳಿತು ಅಡ್ಡಾದಿಡ್ಡಿ ಚಾಲನೆ ಮಾಡಿದ್ದಾರೆ.ಆಗ ಚಾಲಕನ ನಿಯಂತ್ರಣ ತಪ್ಪಿ ಬೈಕ್  ಡಿವೈಡರ್ ಗೆ ಡಿಕ್ಕಿಯಾಗುತ್ತಿದ್ದಂತೆ ಬೈಕ್ ನಿಂದ ಹಾರಿ  ಯುವಕರು ಕೆಳಗೆ ಬಿದ್ದಿದ್ದಾರೆ.ಹೆದ್ದಾರಿಯಲ್ಲಿ ಯುವಕರ ಹುಚ್ಚಾಟ ಮೊಬೈಲ್ ನಲ್ಲಿ ಸೆರೆಯಾಗಿದೆ.ರಸ್ತೆಯ ಡಿವೈಡರ್ ಮೇಲೆ ಚೆಂಡಿನಂತೆ ಯುವಕರು ಹಾರಿ ಬಿದ್ದಿದ್ದಾರೆ.ಇತ್ತೀಚಿಗೆ ಹೆದ್ದಾರಿಯಲ್ಲಿ  ಯುವಕರ ಪುಂಡಾಟ ಹೆಚ್ಚಾಗಿದ್ದು,ಗಾಯಗೊಂಡ ಯುವಕರನ್ನು ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ