ಮಾನಭಂಗ ಮಾಡಿದ ಬಾಲಕಿಯ ಮದುವೆಯಾದ ಆರೋಪಿ

ಬುಧವಾರ, 17 ಮಾರ್ಚ್ 2021 (09:52 IST)
ಪಾಟ್ನಾ: ಅಪ್ರಾಪ್ತೆಯ ಮಾನಭಂಗ ಮಾಡಿದ ಯುವಕ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಆಕೆಯನ್ನು ಕೋರ್ಟ್ ಆವರಣದಲ್ಲೇ ಮದುವೆಯಾದ ಘಟನೆ ಬಿಹಾರದಲ್ಲಿ ನಡೆದಿದೆ.


ಮೊಹಮ್ಮದ್ ರಾಜಾ ಎಂಬಾತ ಅಪ್ರಾಪ್ತ ಬಾಲಕಿಯ ಶೀಲಕೆಡಿಸಿದ್ದ. ಈ ವಿಚಾರ ಕೋರ್ಟ್ ಮೆಟ್ಟಿಲೇರುತ್ತಿದ್ದಂತೇ ಆತ ಭಯಗೊಂಡಿದ್ದ. ಅಲ್ಲದೆ ಆತನ ವಿರುದ್ಧ ಪೋಸ್ಕೋ ಖಾಯಿದೆಯಡಿ ಕೇಸು ದಾಖಲಾಗುತ್ತಿತ್ತು. ಹೀಗಾಗಿ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಹೇಳಿದ.

ಈ ಸಂಬಂಧ ಕೋರ್ಟ್ ಆವರಣದಲ್ಲೇ ಎರಡೂ ಕುಟುಂಬಸ್ಥರು ಮಾತುಕತೆ ನಡೆಸಿ ಅಲ್ಲಿಯೇ ಮುಸ್ಲಿಂ ಧರ್ಮಗುರುವೊಬ್ಬರ ನಿರ್ದೇಶನದಂತೆ ಮದುವೆಯೂ ಆಗಿದ್ದಾರೆ. ಈ ಸಂಬಂಧ ಈಗ ಕೋರ್ಟ್ ವಿಚಾರಣೆ ನಡೆಸಿದೆ. ಮಾನಭಂಗ ಮಾಡಿರುವುದಲ್ಲದೆ, ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿರುವುದು ಕಾನೂನು ರೀತ್ಯಾ ಗಂಭೀರ ಅಪರಾಧವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ