ಕಾಡಾನೆ ಕೊಂದು ದಂತ ಮಾರುವ ವೇಳೆ ಸಿಕ್ಕಿಬಿದ್ದ ಆರೋಪಿಗಳು
ಕಾಡಾನೆ ಕೊಂದು ದಂತ ತೆಗೆದು ಮಾರಾಟ ಮಾಡೋ ವೇಳೆ ಆರೋಪಿಗಳು ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆನೆ ಹೂತಿದ್ದ ಸ್ಥಳದಲ್ಲಿ ಆನೆ ಮೃತದೇಹ ತೆಗೆದು ಮರಣೋತ್ತರ (Postmortem) ಪರೀಕ್ಷೆ ಮಾಡಲಾಗಿದೆ. ಅರಣ್ಯ ತನಿಖಾ ದಳದ ಡಿಸಿಎಫ್ ರವೀಂದ್ರ ನೇತೃತ್ವದಲ್ಲಿ ಸ್ಥಳ ಮಹಜರ್ ಮಾಡಲಾಗಿದ್ದು, ನೆನ್ನೆ ಆನೆ ದಂತ ಮಾರಾಟಮಾಡಲು ಮುಂದಾಗಿದ್ದ ವೇಳೆ ಮೂರು ಆರೋಪಿಗಳ ಬಂಧನ ಮಾಡಲಾಗಿದೆ. ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳ ಬಂಧನ ಮಾಡಲಾಗಿದೆ. ಹಾಸನ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಬೆಳೆ ರಕ್ಷಣೆಗಾಗಿ ಅಕ್ರಮ ವಿದ್ಯುತ್ ಹರಿಸಿದ್ದ ವೇಳೆ ಕಾಡಾನೆ ಬಲಿಯಾಗಿದೆ. ಆನೆ ಮೃತ ಪಟ್ಟಾಗ ಮಾಹಿತಿ ಮುಚ್ಚಿಟ್ಟು ಆನೆಯನ್ನ ಆರೋಪಿ ಹೂತಿದ್ದ. ವೀರಾಪುರ ಗ್ರಾಮದ ಚಂದ್ರೇಗೌಡ,ನಾಗರಾಜ್, ತಿಲಕ್ರಿಂದ ಕೃತ್ಯವ್ಯಸಗಲಾಗಿದೆ. ಆರು ತಿಂಗಳ ಹಿಂದೆ ಆನೆ ಕರೆಂಟ್ ಶಾಕ್ನಿಂದ ಕಾಡಾನೆ ಸಾವನ್ನಪ್ಪಿದೆ. ಆನೆ ಮೃತದೇಹ ಕೊಳೆತ ಬಳಿಕ ಮತ್ತೆ ಹೂತಿದ್ದಾರೆ. ಬಳಿಕ ಕಾಡಾನೆಯಿಂದ ದಂತ ಕಿತ್ತು ಮಾರಾಟಕ್ಕೆ ಯತ್ನಿಸಿದ್ದಾರೆ. ಕೋಟ್ಯಾಂತರ ರೂ. ಮೌಲ್ಯಕ್ಕೆ ದಂತ ಮಾರಾಟ ಮಾಡಲು ಆರೋಪಿಗಳು ಸಜ್ಜಾಗಿದ್ದು, ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಆನೆ ಕಳೇಬರ ಹೊರತೆಗೆದು ಪರೀಕ್ಷೆ ಮಾಡಲಾಗಿದೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.