ವಾಯು ಮಾಲಿನ್ಯ ಹದಗೆಡುತ್ತಿರೋ ಹಿನ್ನೆಲೆ ಸುಪ್ರೀಂ ಕೋರ್ಟ್ ಕೂಡ ಪಟಾಕಿ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಕಾಳಸಂತೆಯಲ್ಲಿ ಪಟಾಕಿ ಗೋದಾಮಗಳು, ಮಳಿಗೆಗಳು ತಲೆ ಎತ್ತುತ್ತಿವೆ.ಬಿಬಿಎಂಪಿ ,ನಗರ ಪೊಲೀಸ್ ಇಲಾಖೆ ಪಟಾಕಿ ಮಾರಾಟಕ್ಕೆ ನಿರ್ದಿಷ್ಟ ಜಾಗ ಗುರುತು ಮಾಡಿದ್ದು,ಈ ಬಾರಿ ಮಾಮೂಲಿ ಪಟಾಕಿ ನಿಷೇಧ ಮಾಡಿದ್ದು ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಿದ್ದಾರೆ.ನಗರದ್ಯಾಂತ 62 ಮೈದಾನ ಗಳಲ್ಲಿ ಪಟಾಕಿ ಮಳಿಗೆಗೆ ಅವಕಾಶ ನೀಡಲಾಗಿದೆ.
ಮೈದಾನಗಳಲ್ಲಿ 263 ಮಳಿಗೆಗಳಲ್ಲಿ ಅನುಮತಿಯಿದೆ.ಮಳಿಗೆಗಳು ಹಾಕಲು ಒಟ್ಟು 912 ಅರ್ಜಿಗಳು ಬಂದಿದ್ದು,ವಿವಿಧ ಇಲಾಖೆಯಿಂದ ಪರಿಶೀಲನೆ ನಡೆಸಲಾಗಿದೆ.ಲಾಟರಿ ಮೂಲಕ 263 ಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.ಹೆಚ್ಚು ಶಬ್ದ, ಹೊಗೆ ಸೂಸುವ ಪಟಾಕಿ ಗಳಿಗೆ ಅವಕಾಶ ವಿಲ್ಲ. ರಾತ್ರಿ ಎಂಟರಿಂದ ಬೆಳಗ್ಗೆ ಹತ್ತು ಗಂಟೆ ತನಕ ಮಾತ್ರ ಪಟಾಕಿ ಹೊಡೆಯಲು ಅವಕಾಶ ವಿದೆ.ಅನಧಿಕೃತವಾಗಿ ಪಟಾಕಿಮಾರಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ ಎಂದು ಪೊಲೀಸ್ ಕಮೀಷನರ್ ಬಿ ದಯಾನಂದ ಎಚ್ಚರಿಕೆ ಕೊಟ್ಟಿದ್ದಾರೆ.