ಸಮುದ್ರದ ಅಲೆಗಳ ಹೊಡೆತಕ್ಕೆ ಜೀವಬಿಟ್ಟ

ಬುಧವಾರ, 10 ಜೂನ್ 2020 (18:06 IST)
ಪ್ರವಾಸಿಗನೊಬ್ಬ ಸಮುದ್ರದಲ್ಲಿ ಈಜುವ ವೇಳೆ ನೀರುಪಾಲಾಗಿ ಜೀವಬಿಟ್ಟಿದ್ದಾನೆ.

ಪ್ರವಾಸಿಗನೊಬ್ಬ ಸಮುದ್ರದಲ್ಲಿ ಈಜುವ ವೇಳೆ ಮುಳುಗಿ ಮೃತಪಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಡೆದಿದೆ.

ರಿಷಬ್ ಸಿಂಗ್ (36) ಮೃತ ಪ್ರವಾಸಿಗ. ಈತ ಬೆಂಗಳೂರಿನಿಂದ ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದು, ಕುಡ್ಲೆ ಬೀಚ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ.

ಬೆಳಿಗ್ಗೆ ಸಮುದ್ರಕ್ಕೆ ಈಜಲು ತೆರಳಿದ್ದಾಗ ಅಲೆಗಳ ಹೊಡೆತಕ್ಕೆ ಸಿಲುಕಿ ಮೇಲೆ ಬರಲಾಗದೆ ಮುಳುಗಿ ಸಾವನ್ನಪ್ಪಿದ್ದಾನೆ. ಗೋಕರ್ಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ