ಕೇಂದ್ರದ ಮಾಜಿ ಸಚಿವರ ಪತ್ನಿಯ ವಿರುದ್ಧ ಕರೆಂಟ್ ಕಳ್ಳತನದ ಆರೋಪ

ಗುರುವಾರ, 12 ಸೆಪ್ಟಂಬರ್ 2019 (13:08 IST)
ಬೆಂಗಳೂರು : ಕೇಂದ್ರದ ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ  ಅವರ  ಪತ್ನಿ ನಾಗರತ್ನರ ಮೇಲೆ  ಕರೆಂಟ್ ಕಳ್ಳತನದ ಆರೋಪ ಕೇಳಿಬಂದಿದೆ.
ಕೇಂದ್ರದ ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ  ಅವರ ಪತ್ನಿ ನಾಗರತ್ನಗೆ ಸೇರಿದ ಬೆಂಗಳೂರಿನ ಸಂಜಯನಗರದಲ್ಲಿರುವ  3 ಮಹಡಿ ಕಟ್ಟಡದಲ್ಲಿ ಕರೆಂಟ್ ಕಳವು ಆಗಿದೆ ಎನ್ನಲಾಗಿದೆ. ಕಟ್ಟಡಕ್ಕಾಗಿ 1 ವರ್ಷದಿಂದ ನಿರಂತರವಾಗಿ 9.84 ಲಕ್ಷ ರೂ. ಮೊತ್ತದ ಕರೆಂಟ್ ಕಳವು ಮಾಡಲಾಗಿದ್ದು, ದಂಡ ಸೇರಿ 22 ಲಕ್ಷ ರೂ. ಬಾಕಿ ಉಳಿಸಿಕೊಂಡ ಆರೋಪ ಕೇಳಿಬಂದಿದೆ.


ಆದರೆ ಇಂತಹ ಪ್ರಕರಣಗಳಲ್ಲಿ ಕಟ್ಟಡದ ಮಾಲೀಕರ ಮೇಲೆ ಪ್ರಕರಣ ದಾಖಲಿಸುವ ಬದಲು ಬಾಡಿಗೆದಾರರ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ರಾಜಕೀಯ ಒತ್ತಡದಿಂದ ಪೊಲೀಸರು ನಾಗರತ್ನ ಹೆಸರು ಕೈಬಿಟ್ರಾ ಎಂಬ ಅನುಮಾನ ಇದೀಗ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ