ಇಫ್ತಾರ್ ಕೂಟ ಏರ್ಪಡಿಸಿದ್ದ ಪೇಜಾವರ ಶ್ರೀಗಳನ್ನ ಅಭಿನಂಧಿಸಲು ಕ್ಯೂನಲ್ಲಿರುವವರು ಈ ಪ್ರಶ್ನೆ ಕೇಳಿ: ದಿನೇಶ್ ಅಮೀನ್ ಮಟ್ಟು

ಸೋಮವಾರ, 3 ಜುಲೈ 2017 (17:14 IST)
ರಂಜಾನ್ ಸಂದರ್ಭ ಪೇಜಾವರ ಶ್ರೀಗಳು ಉಡುಪಿ ಮಠದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಏರ್ಪಡಿಸಿದ್ದ ಪ್ರಕರಣ ಭಾರೀ ಸುದ್ದಿ ಮಾಡಿತ್ತು. ಈ ಕುರಿತಂತೆ ಪರ-ವಿರೋಧ ಹೇಳಿಕೆಗಳು ಕೇಳಿ ಬಂದಿದ್ದವು. ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಪ್ರತಿಬಟನೆ ನಡೆಸಿದ್ದರು.


ಇದೀಗ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ಮತ್ತು ಪತ್ರಕರ್ತರಾಗಿರುವ ದಿನೇಶ್ ಅಮಿನ್ ಮಟ್ಟು ಈ ಬಗ್ಗೆ ಪೇಜಾವರ ಶ್ರೀಗಳನ್ನ ಪ್ರಶ್ನಿಸಿದ್ದಾರೆ. ದಿನೇಶ್ ಅಮೀನ್ ಮಟ್ಟು ಅವರು ಹಾಕಿರುವ ಫೇಸ್ಬುಕ್ ಪೋಸ್ಟ್`ನ ಯಥಾವಾತ್ತಾಗಿ ಇಲ್ಲಿ ನೀಡಲಾಗಿದೆ.

ಉಡುಪಿ ಮಠದಲ್ಲಿ ಇಫ್ತಾರ್ ಕೂಟ ನಡೆಸಿ ನಮಾಜ್ ಮಾಡಲು ಕೂಡಾ ಅವಕಾಶ ನೀಡಿರುವುದು ಮಾತ್ರವಲ್ಲ. ಆ ಸ್ಥಳವನ್ನು ಗೋಮೂತ್ರದಿಂದ ಶುದ್ಧೀಕರಿಸಲು ನಿರಾಕರಿಸಿರುವ ಗೌರವಾನ್ವಿತ ಪೇಜಾವರ ಸ್ವಾಮಿಗಳ 'ಕ್ರಾಂತಿಕಾರಿ' ನಿಲುವನ್ನು ಸ್ವಾಗತಿಸಲು ಕ್ಯೂನಲ್ಲಿ ನಿಂತಿರುವವರು ದಯವಿಟ್ಟು ಸ್ವಾಮಿಗಳಿಗೆ ಒಂದು ಸಣ್ಣ ಪ್ರಶ್ನೆ ಕೇಳಬೇಕೆಂದು ಸವಿನಯ ವಿನಂತಿ.
ದಲಿತರು ಉಡುಪಿ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಡುಪಿಯ ಬೀದಿಯಲ್ಲಿ ನಡೆದಾಡಿದ ಮಾತ್ರಕ್ಕೆ ನಿದ್ದೆಗೆಡಿಸಿಕೊಂಡ ಸ್ವಾಮಿಗಳು ಉಡುಪಿ ಮಠವನ್ನೇ ಗೋಮೂತ್ರ ಸುರಿದು ಶುದ್ಧೀಕರಿಸಿದ್ದೇಕೆ? 
ಇನ್ನೂ ಒಂದು ಪ್ರಶ್ನೆ ಇದೆ. ಸ್ವಾಮೀಜಿಯವರ ಇಫ್ತಾರ್ ಕೂಟವನ್ನು ಬೆಂಬಲಿಸುತ್ತಿರುವ ರಾಜಕೀಯ ನಾಯಕರು ಉಡುಪಿ ಮಠವನ್ನು ಸ್ವಚ್ಛ ಗೊಳಿಸಿದ್ದ ಸ್ವಾಮೀಜಿಯವರ ನಡೆಯ ಬಗ್ಗೆ ಯಾಕೆ ಬಾಯಿಮುಚ್ಚಿಕೊಂಡಿದ್ದರು?
ದಲಿತರು ಮುಸ್ಲಿಮರಿಗಿಂತಲೂ......?

ವೆಬ್ದುನಿಯಾವನ್ನು ಓದಿ