ಈಶ್ವರಪ್ಪ-ಬಿಎಸ್ ವೈಗೆ ಖಡಕ್ ವಾರ್ನಿಂಗ್ ಕೊಟ್ಟ ಅಮಿತ್ ಶಾ
ಚುನಾವಣೆ ಸಂದರ್ಭದಲ್ಲಿ ಇಲ್ಲದ ರಗಳೆ ತಂದುಕೊಳ್ಳಬೇಡಿ ಎಂದು ಅಮಿತ್ ಶಾ, ನಿನ್ನೆ ರಾತ್ರಿ ಈಶ್ವರಪ್ಪ ಮನೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದಾಗ ಉಭಯ ನಾಯಕರಿಗೂ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಬಹಿರಂಗವಾಗಿ ಇಲ್ಲದ ಹೇಳಿಕೆ ನೀಡಬೇಡಿ. ವಿವಾದ ಸೃಷ್ಟಿಸಬೇಡಿ. ಈ ಚುನಾವಣೆಯ ಜವಾಬ್ದಾರಿ ನೀವು ಇಬ್ಬರೂ ನಾಯಕರದ್ದು. ಬಿಜೆಪಿ ಗೆಲ್ಲಿಸುವುದೇ ನಿಮ್ಮ ಗುರಿಯಾಗಿರಬೇಕು. ಇಲ್ಲದ ವಿಚಾರಗಳನ್ನು ಸೃಷ್ಟಿಸಿಕೊಳ್ಳಬೇಡಿ ಎಂದು ಶಾ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಶಾ ಸೂಚನೆಗೆ ಇಬ್ಬರೂ ನಾಯಕರು ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.