ಅಡಿಕೆ ಬೆಳೆಗಾರರಿಗೆ ಅಮಿತ್ ಷಾ ಹೇಳಿದ್ದೇನು?

ಸೋಮವಾರ, 26 ಮಾರ್ಚ್ 2018 (18:40 IST)
ಸುಪಾರಿ ಮೇಲಿನ ಸುಂಕ ಪ್ರತಿಶತ ನೂರರಷ್ಟು ಏರಿಕೆ ಕಂಡಿದ್ದರಿಂದ ನಮ್ಮ ದೇಶದ ಬೆಳೆಗಳಿಗೆ ಬೆಲೆ ಬರುತ್ತದೆ. ವಿವಿಧ ಅಡಿಕೆ ಬೆಳೆಗಾರ ಸಂಘದಲ್ಲಿ ಅಡಿಕೆಗೆ ಸೂಕ್ತ ಬೆಲೆ ಕೊಡಲಾಗದ ಸಮಯದಲ್ಲಿ ಕೇಂದ್ರ ಸರಕಾರ ಉತ್ತಮ ಬೆಲೆ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. 
ಜಿಲ್ಲೆಯ ತೀರ್ಥಹಳ್ಳಿ ಸರ್ಕಾರಿ ಕಾಲೇಜು ಮೈದಾನದಲ್ಲಿ ಅಡಿಕೆ ಬೆಳೆಗಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 2016ರಲ್ಲಿ 2.61 ಲಕ್ಷ ಕೊಟ್ಟು ಕೇಂದ್ರ ಖರೀದಿಸಿದೆ. ಒಟ್ಟು 40 ಟನ್ ಅಡಿಕೆಯನ್ನು ಕೇಂದ್ರ ಖರೀದಿಸಿದೆ ಎಂದಿದ್ದಾರೆ. ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಕೇಂದ್ರ ಹಾಗೂ ರಾಜ್ಯ ಸರಕಾರ ಸೇರಿಕೊಂಡು ಶಿವಮೊಗ್ಗದಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಕೇಂದ್ರ ಸ್ಥಾಪಿಸಲಾಗುತ್ತದೆ ಎಂದರು.
 
ಸಿದ್ರಾಮಯ್ಯ ರಾಜಕೀಯ ಕಲಾವಿದ: 
 
ಮುಖ್ಯಮಂತ್ರಿ ಸಿದ್ರಾಮಯ್ಯ ಮಾಡಿರುವ ಎಲ್ಲ ಅಭಿವೃದ್ಧಿ ಯೋಜನೆಗಳು ನಿದ್ದೆ ಮಾಡುತ್ತಿವೆ. ಸಿದ್ರಾಮಯ್ಯ ಒಬ್ಬ ರಾಜಕೀಯ ಕಲಾವಿದರಾಗಿದ್ದಾರೆ ಎಂದು ಅಮಿತ್ ಷಾ ದೂರಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ