ಯೂಟ್ಯೂಬ್ ನೋಡಿ ಮನೆಗಳ್ಳತನ ಮಾಡಿದ ಆರೋಪಿ‌ ಅಂದರ್

geetha

ಸೋಮವಾರ, 12 ಫೆಬ್ರವರಿ 2024 (14:23 IST)
ಬೆಂಗಳೂರು-ಯೂಟ್ಯೂಬ್ ನೋಡಿ ಮನೆಗಳ್ಳತನ ಮಾಡುತ್ತಿದ್ದ.ಕಳ್ಳತನ ಮಾಡಿ ಬಂದು ಪೊಲೀಸ್ರ ಜೊತೆಯೇ ಓಡಾಡ್ತಿದ್ದ‌.ಅಲ್ಲದೇ  ಸ್ಟೇಷನ್ ಗೆ ಸಮೀಪವೇ ಕಿಲಾಡಿ ಮನೆ ಮಾಡ್ಕೊಂಡಿದ್ದ ಏರಿಯಾದಲ್ಲಿ ಸಾಲು ಸಾಲು ಮನೆಗಳ್ಳತನ ಮಾಡಿ ಪೊಲೀಸ್ರ ಜೊತೆಗೆ ಖತರ್ನಾಕ್  ಓಡಾಡಿಕೊಂಡಿರ್ತಿದ್ದ.ಬಿಟಿಎಂ ಲೇಔಟ್ ಎರಡನೇ ಹಂತದ ಎನ್ ಎಸ್ ಪಾಳ್ಯದಲ್ಲಿ ಕಳ್ಳತನ ಮಾಡುವಾಗ ರೆಡ್ ಹ್ಯಾಂಡಾಗಿ ಕಳ್ಳ ಸಿಕ್ಕಿಬಿದ್ದಿದ್ದಾನೆ.ಸುನಿಲ್ ಅಲಿಯಾಸ್ ತಮಟೆ ಕೊನೆಗೂ ಅಂದರ್ ಆಗಿದ್ದಾನೆ.ಪೊಲೀಸರಿಂದ ರಾಜ ಮರ್ಯಾದೆ ಪಡೆಯುತ್ತಿದ್ದವನಿಗೆ ಸದ್ಯ ಲಾಠಿ ರುಚಿ ನೀಡಲಾಗ್ತಿದೆ.ಹಲವಾರು ಕಳ್ಳತನ  ಮಾಡಿರುವುದಾಗಿ ಸುನೀಲ್ ತಪ್ಪೊಪ್ಪಿಕೊಂಡಿದ್ದಾನೆ.ಮೈಕೋ ಲೇಔಟ್ ಸೇರಿ ಅನೇಕ ಠಾಣಾ ವ್ಯಾಪ್ತಿಯಲ್ಲಿ ಸುನೀಲ್ ಕಳ್ಳತನ ಮಾಡಿದ್ದಾನೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ