ಇಂದೇ ನಂದಿನಿ ಹಾಲಿನ ದರ ಪರಿಷ್ಕರಣೆಯ ಪ್ರಸ್ತಾವನೆ..? ಅಂತಿಮವಾಗುತ್ತಾ..??ದುಬಾರಿ ದುನಿಯಾದ ನಡುವೆ ರಾಜ್ಯದ ಜನರಿಗೆ ಕೆಎಂಎಫ್ ಇಂದೇ ಶಾಕ್ ನೀಡಲಿದೆಯಾ ಎಂಬ ಪ್ರಶ್ನೆ ಶುರುವಾಗಿದೆ.14 ಹಾಲು ಒಕ್ಕೂಟಗಳ ಬೇಡಿಕೆ ಸಂಬಂಧ ಕೆಎಂಎಫ್ ನಿಂದ ಇಂದ ಮಹತ್ವದ ಸಭೆ ನಡೆಯಲಿದೆ.ಇಂದು KMF ಅಧ್ಯಕ್ಷ ಭೀಮಾ ನಾಯ್ಕ್ ನೇತೃತ್ವದಲ್ಲಿ ಬೋರ್ಡ್ ಮೀಟಿಂಗ್ ನಡೆಯಲಿದೆ.ಹಾಲಿನ ದರ ಹೆಚ್ಚಳಕ್ಕೆ ಹಾಲು ಒಕ್ಕೂಟಗಳು ಒತ್ತಾಯಿಸುತ್ತಿದ್ದು, ಪ್ರತಿ ಲೀ. ಹಾಲಿಗೆ 5 ರೂ. ಹೆಚ್ಚಳಕ್ಕೆ ಒಕ್ಕೂಟಗಳು ಮನವಿ ಮಾಡಿದೆ.ಹಾಲು ಒಕ್ಕೂಟಗಳ ಮನವಿ ಮೇರೆಗೆ ಇಂದಿನ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ಹಾಲಿನ ಏರಿಕೆ ಸಂಬಂಧ ಸುದೀರ್ಘ ಚರ್ಚೆ ಸಾಧ್ಯತೆ ಇದೆ.ಡೈರಿ ಸರ್ಕಲ್ ಬಳಿ ಇರುವ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಬೋರ್ಡ್ ಮೀಟಿಂಗ್ ನಡೆಯಲಿದೆ.