ಮದ್ಯಪ್ರಿಯರಿಗೆ ಮತ್ತೋಂದು ಶಾಕ್
ಕಳೆದ ಮೂರು ದಿನಗಳಿಂದ ಮದ್ಯಪ್ರಿಯರಿಗೆ ಮದ್ಯ ಸಿಗದೇ ಚಡಪಡಿಸುವಂತಾಗಿದ್ದಾರೆ. ಹೊಸ ಬಿಲ್ಲಿಂಗ್ ತಂತ್ರಾಂಶದಲ್ಲಿನ ದೋಷದಿಂದಾಗಿ ಮದ್ಯ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ರಾಜ್ಯ ಪಾನೀಯ ನಿಗಮದ ಮೂಲಕವೇ ರಾಜ್ಯದಲ್ಲಿ ಮದ್ಯ ಪೂರೈಕೆಯಾಗುತ್ತಿದೆ. ಕಳೆದ ಮಾರ್ಚ್ ಅಂತ್ಯದವರೆಗೂ ಹಳೆಯ ಸಾಫ್ಟ್ವೇರ್ ಮೂಲಕವೇ ಮದ್ಯ ಪೂರೈಕೆಯ ಬಿಲ್ಲಿಂಗ್ ಆಗುತ್ತಿತ್ತು. ಆದರೆ 2022ರ ಏಪ್ರಿಲ್ 1ರಿಂದ ವೆಬ್ ಇಂಡೆಂಟಿಂಗ್ ಎಂಬ ಹೊಸ ಸಾಫ್ಟ್ವೇರ್ ಮೂಲಕವೇ ಮದ್ಯದ ಬಿಲ್ಲಿಂಗ್ ಮಾಡುವಂತೆ ಸರ್ಕಾರ ಸೂಚಿಸಿದ್ದರಿಂದ ವೆಬ್ ಇಂಡೆಂಟಿಂಗ್ ಮೂಲಕ ಬಿಲ್ಲಿಂಗ್ ನಡೆಯುತ್ತಿದೆ. ಮದ್ಯದ ಗೋಡೌನ್ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮದ್ಯ ಶೇಖರಣೆಯಾಗಿದೆ. ಆದರೆ ಬಿಲ್ಲಿಂಗ್ ವ್ಯವಸ್ಥೆಯ ನೂತನ ವೆಬ್ ಇಂಡೆಂಟಿಂಗ್ ತಂತ್ರಜ್ಞಾನವು ತಾಂತ್ರಿಕ ತೊಂದರೆ ಒಳಪಟ್ಟಿದ್ದರಿಂದ ಬಿಲ್ಲಿಂಗ್ ಆಗುತ್ತಿಲ್ಲ. ಹೀಗಾಗಿ ಮದ್ಯವು ಬಿಲ್ಲಿಂಗ್ ಆಗದೇ ಗೋಡೌನ್ದಲ್ಲಿದೆ. ಇದು ಮದ್ಯ ಪ್ರಿಯರ ಕೈಗೆ ಸಿಗದಂತಾಗಿದೆ.