ಮಾರುಕಟ್ಟೆಯಲ್ಲಿ ಈರುಳ್ಳಿಗೆ ಡಿಮ್ಯಾಂಡ್ ಹೆಚ್ಚಿದೆ.ಶತಕದತ್ತ ಈರುಳ್ಳಿ ಬೆಲೆ ಎರಡೇ ವಾರದಲ್ಲಿ ಬೆಲೆ 60% ಏರಿಕೆಯಾಗಿದೆ. ಈರುಳ್ಳಿ ದರ ಕೆಜಿಗೆ 65 ರೂಪಾಯಿಯಾಗಿದ್ದು,ಗ್ರಾಹಕರಿಗೆ ಈರುಳ್ಳಿ ದರ ಕಣ್ಣೀರು ತರಿಸಲಿದೆ.ಮಳೆ ಕೊರತೆಯಿಂದಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.ಇದರಿಂದ ಕೆಜಿ ಈರುಳ್ಳಿದರ 60- 65 ರೂಪಾಯಿಗೆ ಮಾರಾಟ ಮಾಡಲಾಗ್ತಿದೆ.
ಈ ಬಾರಿ ಮಳೆ ಕೈ ಕೊಟ್ಟಿರೋದ್ರಿಂದ ಮಾರುಕಟ್ಟೆಯಲಿ ಎಲ್ಲಾ ದಿನಸಿ ಹಾಗೂ ತರಕಾರಿಗಳ ಬೆಲೆ ಏರಿಕೆ ಸಾಧ್ಯತೆ ಇದೆ.ಇದೇ ಪರಿಸ್ಥಿತಿ ಮುಂದುವರೆದರೆ ಕೆಜಿಗೆ 80-100 ಈರುಳ್ಳಿ ದರ ತಲುಪುವ ಸಾಧ್ಯತೆ ಇದೆ.ಹೊರ ರಾಜ್ಯಗಳಿಂದಲೂ ಈರುಳ್ಳಿ ಬಾರದ ಹಿನ್ನೆಲೆ ಮುಂಬೈ ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿದೆ.15 ದಿನಗಳ ಹಿಂದೆಯಷ್ಟೇ 100 ರೂಪಾಯಿಗೆ 3-4 ಕೆಜಿ ಸಿಗ್ತಿದ್ದ ಈರುಳ್ಳಿ ಇದೀಗ ಕೇವಲ 15 ದಿನಗಳಲ್ಲಿ ಅರ್ಧ ಶತಕದಾಟ್ಟಿದೆ.ದರ ಏರಿಕೆ ಕಂಡು ಗ್ರಾಹಕರು ಶಾಕ್ ಆಗಿದ್ದಾರೆ.ಮುಂದಿನ ದಿನಗಳಲ್ಲಿ ಇದೇ ರೀತಿ ದರ ಏರಿಕೆಯಾದರೆ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬಾರಿ ಡಿಮ್ಯಾಂಡ್ ಶುರುವಾಗಲಿದೆ.