ಮೃತದೇಹಗಳನ್ನ ತರಿಸುವಂತೆ ಸಿಎಂ ಬಳಿ ಮನವಿ
ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ ಹಾಗೂ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಗಳನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಮೃತರ ಸಂಬಂಧಿಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ. ಸಿಎಂ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮೃತ ಪ್ರತಿಭಾ ತಾಯಿ ಪ್ರೇಮಾ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಅವರು ಎಲ್ಲಾ ನೆರವು ನೀಡುತ್ತೇವೆ ಎಂಬ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಮಗಳು, ಅಳಿಯ ಐದು ವರ್ಷದ ಹಿಂದೆ ಅಲ್ಲಿ ಹೋಗಿದ್ದರು. ಅಮೆರಿಕಾದಲ್ಲಿ ಅಂತ್ಯಸಂಸ್ಕಾರ ಮಾಡುವ ಮನಸ್ಸಿಲ್ಲ. ನಮ್ಮ ಊರಲ್ಲೇ ಅವರ ಅಂತ್ಯಕ್ರಿಯೆ ಆಗಬೇಕು. ಹೀಗಾಗಿ ಮೃತ ದೇಹ ತರಿಸಿಕೊಳ್ಳಲು ಸಿಎಂಗೆ ಮನವಿ ಮಾಡಿದ್ದೇವೆ ಎಂದರು.