ಅಡುಗೆ ಮಾಡುವ ಪ್ರಜರ್ ಕುಕ್ಕರ್ ನಲ್ಲಿ ಸಿಂಥೆಟಿಕ್ ಡ್ರಗ್ ತಯಾರು ಮಾಡಿ ದೇಶ - ವಿದೇಶಗಳಿಗೆ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನ ನಗರದಲ್ಲಿ ಬಂಧನ ಮಾಡಲಾಗಿದೆ.ಬೆನ್ಜ್ ಮಿನ್ ಬಂಧಿತ ಆರೋಪಿಯಾಗಿದ್ದು,10 ಕೋಟಿ ಮೌಲ್ಯದ MDMA ಹಾಗೂ ಅದರ ತಯಾರಿಕೆಗೆ ಬಳಸುತ್ತಿದ್ದ,ರಾಸಾಯನಿಕ ಮತ್ತು ರಾಸಾಯನಿಕ ಆಮ್ಲ ಉಪಕರಣಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಮಾರಾಟ ಮಾಡ್ತಿದ್ರು.
NDP's ಕಾಯ್ದೆ ಮತ್ತು 14 ಫಾರೀನರ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಿ 5 kg MDMA, MDMA ತಯಾರು ಮಾಡಲು ಬೇಕಾದ ಕಚ್ಚಾ ಪದಾರ್ಥಗಳು, 5 ಲೀಟರ್ ಕುಕ್ಕರ್ , ಸ್ಟೌವ್ , ಗ್ಯಾಸ್ ಸಿಲಿಂಡರ್,ಮೊಬೈಲ್ ಪೋನ್ ದ್ವಿಚಕ್ರ ವಾಹನ ವಶ ಸೇರಿ ಒಟ್ಟು 10 ಕೋಟಿ ಮೌಲ್ಯದ ಡ್ರಗ್ ವಶಕ್ಕೆ ಪಡೆದಿರುವ ಪೊಲೀಸ್ ಕಮಿಷನರ್ ದಯಾನಂದ ಹೇಳಿದ್ದಾರೆ.