ಕನಿಷ್ಠ 50% ದಷ್ಟು ಬಿಲ್ ಪಾವತಿ ಮಾಡಬೇಕು- ಕೆಂಪಣ್ಣ

ಶುಕ್ರವಾರ, 13 ಅಕ್ಟೋಬರ್ 2023 (19:47 IST)
ಕರ್ನಾಟಕ ಸ್ಟೇಟ್ ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಡಿ ಕೆಂಪಣ್ಣ ಸುದ್ದಿಗೋಷ್ಟಿ ನಡೆಸಿದ್ದಾರೆ.ಕಳೆದ 5 ತಿಂಗಳಿಂದ ಬಿಲ್ ಪಾವತಿ ಆಗ್ತಿಲ್ಲ.ಸಿಎಂಗೆ ನಾಲ್ಕು ಬಾರಿ ಲೆಟರ್ ಕೊಟ್ಟಿದ್ದಿವಿ.ಇತ್ತಿಚೇಗೆ ಬೆಳಗಾವಿ, ಹುಬ್ಬಳ್ಳಿಯಲ್ಲಿ ಆತ್ಮಹತ್ಯೆ ಯತ್ನಗಳಾಗಿದೆ.ಗುತ್ತಿಗೆದಾರರ ‌ಸಮಸ್ಯೆಯಲ್ಲಿದ್ದು ಕನಿಷ್ಠ 50% ದಷ್ಟು ಬಿಲ್ ಪಾವತಿ ಮಾಡಬೇಕು.ಬಿಲ್ ಪಾವತಿಯಲ್ಲಿ ಸಿನಿಯಾರಿಟಿ ಪಾಲನೆ ಆಗ್ತಿಲ್ಲ.ಅದನ್ನ ಬಿಟ್ಟು ಪಾವತಿಗಳು ಆಗ್ತಿಲ್ಲ ಎಂದು ಕೆಂಪಣ್ಣ ಹೇಳಿದ್ದಾರೆ.
 
ಸರಕಾರ 7% ಪೇ ಮೆಂಟ್ ಮಾಡುತ್ತಿದೆ.ಆದ್ರೆ ಅದಕ್ಕೆ 18% ಜಿಎಸ್ ಟಿ ಕಟ್ಟಬೇಕಾದ್ರೆ‌ ಕೈಯಿಂದ ಹಾಕಿಕೊಡಬೇಕು.ಒಂದು ಲಕ್ಷಕ್ಕೆ 7 ಸಾವಿರ ‌ಅಷ್ಟೇ ಪಾವತಿ ಆಗ್ತಿದೆ.ಲೋಕೋಪಯೋಗಿ ಇಲಾಖೆಯ ಸತೀಶ್ ಜಾರಕಿಹೊಳಿ ಒಬ್ಬರೇ ಸರಿಯಾಗಿ ಸಿನಿಯಾರಿಟಿ ಪಾಲಿಸುತ್ತಿದ್ದಾರೆ.ಬಿಲ್ ಆಗಿಲ್ಲ ಅಂದ್ರೆ ಹೋರಾಟ ಅನಿವಾರ್ಯ.ಇಲ್ಲಿ ಯಾವುದೇ ಪಕ್ಷ ಇಲ್ಲ.ಕೆಂಪಣ್ಣ ಎಲ್ಲಿದ್ದಿಯಾ ಎಂದ ಜಿಟಿ ದೇವೇಗೌಡರು‌ ಹೇಳಿದ್ದಾರೆ.ಮೂರು ವರ್ಷದಿಂದ ‌ನೀವು ಎಲ್ಲಿದ್ದಿರಿ?ಇಷ್ಟೆಲ್ಲಾ ಹೋರಾಟ ಮಾಡೋವಾಗ ನೀವೆಲ್ಲಿದ್ದಿರಿ?ಕಾಂಗ್ರೆಸ್ ಅವರು ತಪ್ಪು ಮಾಡಿದ್ರೂ ಹೋರಾಟ ಮಾಡ್ತಿವಿ.ಸಿಎಂ ಒಂದು ತಿಂಗಳೊಳಗೆ ಸಭೆ ಮಾಡಿ ಸಮಸ್ಯೆ ಬಗೆಹರಿಸಬೇಕು.ಇಲ್ಲದಿದ್ದರೆ ‌ಹೋರಾಟ ಮಾಡುತ್ತೆನೆ.ಎಲ್ಲಾ ಜಿಲ್ಲೆಗಳಲ್ಲೂ ಸಮಸ್ಯೆಯಾಗ್ತಿದೆ.ಸಿಎಂ ಕೂಡಲೇ ಸಭೆ ಕರೆಯಬೇಕು.ಯಾವ ತರ ಪೇಮೆಂಟ್ ಮಾಡಬೇಕು ‌ಎಂದು ಒಂದು ಸಿಸ್ಟಮ್ ಮಾಡಿ.ಸಣ್ಣ ಕಂಟ್ರ್ಯಾಕ್ಟರ್ ‌ಗಳು ಕೆಲಸ ಮಾಡೋದೇ ಬಿಟ್ಟು ಬಿಟ್ಟಿದ್ದಾರೆ.ನಮ್ಮ ರಾಜ್ಯದವರಿಗೆ ಕೆಲಸ ಸಿಗ್ತಿಲ್ಲ ಎಲ್ಲಾ ಆಂದ್ರವದರ ಪಾಲಾಗ್ತಿದೆ.ನಾವೀಗ ಸೆಕೆಂಡ್ ‌ಕ್ಲ್ಯಾಸ್ ಸಿಟಿಜನ್ ಆಗಿದ್ದಿವಿ.ರಾತ್ರೋರಾತ್ರಿ ಬಿಲ್ ಪಾವತಿಗೆ ಕೆಲವರಿಗೆ ಚೆಕ್ ಕೊಡ್ತಿದ್ದಾರೆ.ಕಮೀಷನ್ ‌ಇದೆಯೋ ಇಲ್ಲವೋ ಗೊತ್ತಿಲ್ಲ.ಹಿಂದಿನ ಸರ್ಕಾರದಲ್ಲಿ ನಮ್ಮ ಗುತ್ತಿಗೆದಾರರು ಬರೆವಣಿಗೆಯಲ್ಲಿ ಕಮಿಷನ್ ಕೇಳ್ತಿರೋ ಬಗ್ಗೆ ದೂರನ್ನ ನಮಗೆ ಕೊಟ್ಟಿದ್ರು?ಆದ್ರೆ ಈಗ ಯಾವುದೇ ‌ಕಮೀಷನ್ ದೂರು ಬಂದಿಲ್ಲ ಎಂದು ಕೆಂಪಣ್ಣ ಹೇಳಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ