ಅನೈತಿಕ ಸಂಬಂಧಕ್ಕೆ ಅಡ್ಡಿ ಮಾಡಿದಕ್ಕೆ ಕೊಲೆ ಮಾಡಲು ಯತ್ನ

geetha

ಬುಧವಾರ, 7 ಫೆಬ್ರವರಿ 2024 (16:00 IST)
ಬೆಂಗಳೂರು : -ಪರಶುರಾಮ್‌ ಮಿಲಿಟರಿಯಲ್ಲಿ ಸೇವೆ ಸ್ಲಲಿಸಿ ನಿವೃತ್ತನಾಗಿದ್ದ. ಆತನ ಬಳಿ ಗನ್‌ ಲೈಸೆನ್ಸ್‌ ಸಹ ಇತ್ತು. ಮಂಗಳವಾರ ರಾತ್ರಿ ಸುಮಾರು 12.00 ಗಂಟೆಗೆ ತನ್ನ ಸ್ನೇಹಿತೆಯ ಮನೆಗೆ ನುಗ್ಗಿದ್ದ. ಈ ವೇಳೆ ಆ ಮಹಿಳೆಯ ಪುತ್ರ ಸೂರಜ್‌ ಹಾಗೂ ಪರಶುರಾಮ್‌ ನಡುವೆ ವಾಗ್ವಾದ ನಡೆದಿತ್ತು. ಮಹಿಳೆಯೊಂದಿಗೆ ಅನೈತಿಕ ಸಂಬಂಧಿವಿಟ್ಟುಕೊಂಡಿದ್ದನ್ನು ಪ್ರಶ್ನಿಸಿದ ಮಹಿಳೆಯ ಪುತ್ರನ ಮೇಲೆ ನಿವೃತ್ತ ಯೋಧನೊಬ್ಬ ಗುಂಡು ಹಾರಿಸಿ ಕೊಲ್ಲಲು ಯತ್ನಿಸಿರುವ ಘಟನೆ ಗಂಗಮ್ಮನ ಗುಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. 

 ಕುಪಿತಗೊಂಡ ಪರಶುರಾಮ್‌ ತನ್ನ ಬಳಿಯಿದ್ದ ಗನ್‌ ನಿಂದ ಒಂದು ಸುತ್ತು ಗುಂಡುಹಾರಿಸಿದ್ದು, ಆ ಗುಂಡು ಗೋಡೆಗೆ ಬಡಿದಿತ್ತು. ಅಕ್ಕಪಕ್ಕದ ಮನೆಯವರು ಬಂದು ಜಗಳ ಬಿಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ರಶುರಾಮ್‌ ಎಂಬ ವ್ಯಕ್ತಿ ಆರೋಪಿಯಾಗಿದ್ದು, ಸೂರಜ್‌ ಎಂಬ ಯುವಕ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪರಶುರಾಮ್‌ನನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ