ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಲು ಜಾಗೃತಿ ಅಭಿಯಾನ

ಶನಿವಾರ, 25 ಫೆಬ್ರವರಿ 2023 (20:33 IST)
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 18 ವರ್ಷ ತುಂಬಿದ ಎಲ್ಲಾ ಯುವಕ/ಯುವತಿಯರು ಮತದಾರರ ಪಟ್ಟಿಯಲ್ಲಿ ನೋಂದಣಿ/ಸೇರ್ಪಡೆಯಾಗುವ ಸಲುವಾಗಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
 
ಅದರಂತೆ, ದಕ್ಷಿಣ ವಲಯ ಜಯನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅಪಾರ್ಟ್ ಮೆಂಟ್ ಗಳು, ರಾಗಿ ಗುಡ್ಡ ಬಳಿಯಿರುವ ಕೊಳಗೇರಿ ಪ್ರದೇಶ, ಕಾರ್ಪೊರೇಷನ್ ಕಾಲೋನಿ ಸೇರಿದಂತೆ ಇನ್ನಿತರೆ ಪ್ರದೇಶಗಳಿಗೆ ವಲಯ ಉಪ ಆಯುಕ್ತರಾದ ಶ್ರೀಮತಿ ಲಕ್ಷ್ಮೀ ದೇವಿ ರವರ ನೇತೃತ್ವದಲ್ಲಿ ಮತದಾರ ನೋಂದಣಾಧಿಕಾರಿ, ಸಹಾಯಕ‌ಮತದಾರ ನೊಂದಣಾಧಿಕಾರಿ ಸೇರಿದ ತಂಡವು ಇಂದು  ಭೇಟಿ ನೀಡಿ 18 ವರ್ಷ ತುಂಬಿದ ಯುವ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದರು.
 
ಇದಲ್ಲದೆ ಬಸ್ ತಂಗುದಾಣಗಳು, ಪ್ರಮುಖ ಜಂಕ್ಷನ್ ಗಳು, ಕಾಲೇಜುಗಳಿಗೆ ಭೇಟಿ ನೀಡಿ 18 ವರ್ಷ ತುಂಬಿ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗದೇ ಇರುವಂತಹ ಯುವಕ/ಯುವತಿಯರಿಗೆ ತಮ್ಮ ಮೊಬೈಲ್‌ನಲ್ಲಿ Voter Helpline ತಂತ್ರಾಂಶ ಅಥವಾ www.nvsp.in ವೆಬ್ ಸೈಟ್ ಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದಾಗಿದೆ. ಇಲ್ಲವೇ ಪಾಲಿಕೆಯ ಕಂದಾಯ ಅಧಿಕಾರಿಗಳ ಕಛೇರಿಗೆ ಭೇಟಿ ನೀಡಿ ಪೂರಕ ದಾಖಲೆಗಳನ್ನು ನೀಡಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
 
ಭಾರತ ಚುನಾವಣಾ ಆಯೋಗವು ನನ್ನ ಮತ ನನ್ನ ಹಕ್ಕು ಘೋಷವಾಕ್ಯದಡಿ ಎಲ್ಲಾ ಯುವ ಮತದಾದರು ಮತ ಚಾಲಾಯಿಸಬೇಕೆಂಬ ಉದ್ದೇಶದಿಂದ ಹೆಚ್ಚು-ಹೆಚ್ಚು ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡು ಯುವ ಮತದಾರರಲ್ಲಿ ಮತ ಚಾಲಾಯಿಸುವಂತೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಜೊತೆಗೆ ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಗಳು ಹಾಗೂ ಆಟೋ ಗಳಲ್ಲಿ ಧ್ವನಿವರ್ಧಕಗಳ ಮೂಲಕ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಲು ಅರಿವು ಮೂಡಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ